ಫತೇಪುರ್/ಬಲ್ಲಿಯಾ: ಉತ್ತರ ಪ್ರದೇಶದ ಫತೇಪುರ್ ಹಾಗೂ ಬಲ್ಲಿಯಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ 70 ಹಾಗೂ 98 ವರ್ಷದ ವೃದ್ಧೆಯರ ಮೇಲೂ ಕಾಮುಕರು ಅತ್ಯಾಚಾರ ಎಸಗಿದ್ದಾರೆಂದರೆ ನಂಬಲೇಬೇಕಿದೆ. ಎರಡೂ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣ -1
ಫತೇಪುರ್ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಯೊಂದರ ಕಟ್ಟಡದಲ್ಲಿ ಪ್ರತಿನಿತ್ಯ ಮಲಗುತ್ತಿದ್ದ 70 ವರ್ಷದ ಭಿಕ್ಷುಕಿ ಮೇಲೆ 32 ವರ್ಷದ ವ್ಯಕ್ತಿ ಹೇಯ ಕೃತ್ಯ ಎಸಗಿದ್ದಾನೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಾರಿನಾವ್ ಠಾಣೆಯ ಪೊಲೀಸ್ ಅಧಿಕಾರಿ ನಂದಲಾಲ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಹಾಯಕ ಆಯುಕ್ತೆ ಮೇಲೆ ವ್ಯಾಪಾರಿ ಅಟ್ಯಾಕ್.. ಮೂರು ಬೆರಳು ಕಟ್..
ಪ್ರಕರಣ -2
ಆಗಸ್ಟ್ 20ರಂದು ಬಲ್ಲಿಯಾದಲ್ಲಿ ಮನೆಯಲ್ಲಿದ್ದ 98 ವರ್ಷದ ಅಜ್ಜಿ ಮೇಲೆ 22 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲು ಆರಂಭದಲ್ಲಿ ರಾಸ್ಡಾ ಠಾಣೆಯ ಪೊಲೀಸರು ನಿರಾಕರಿಸಿದ್ದರು. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಸಂತ್ರಸ್ತ ವೃದ್ಧೆಯ ಕುಟುಂಬಸ್ಥರು ಆರೋಪಿಸಿದ್ದಾರೆ.