ETV Bharat / crime

ಮಹಿಳೆ ಕೊಲೆ ಪ್ರಕರಣ: ಇಬ್ಬರು ಖದೀಮರ ಬಂಧನ - Woman murder case

ದೇವಸ್ಥಾನ ಆವರಣದಲ್ಲಿ ಮಲಗಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಆಳಂದ ತಾಲೂಕಿನ ನರೋಣಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

arrest
arrest
author img

By

Published : Mar 12, 2021, 1:30 PM IST

ಕಲಬುರಗಿ: ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಮಹಿಳೆಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಆಳಂದ ತಾಲೂಕಿನ ನರೋಣಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧನ

ಆಳಂದ ತಾಲೂಕಿನ ಕಡಗಂಚಿ ನಿವಾಸಿಗಳಾದ ಶರಣಪ್ಪ ಹೊಟ್ಕರ್ (22), ಶಿವಪುತ್ರ ಹೊಟ್ಕರ್(24) ಬಂಧಿತ ಆರೋಪಿಗಳು. 2019 ಜನವರಿ 14 ರಂದು ಕಡಗಂಚಿ ಗ್ರಾಮದ ಚಂದ್ರತಾಯಿ ದೇವಸ್ಥಾನ ಆವರಣದಲ್ಲಿ ಮಲಗಿದ್ದ ರುಕ್ಕಮ್ಮ ಕಲಾಲ್ ಎಂಬ ಮಹಿಳೆಯನ್ನು ಕೊಲೆ ಮಾಡಿದ್ದರು. ಕೊಲೆ ನಂತರವೂ ಊರಿನಲ್ಲಿ ರಾಜಾರೋಷವಾಗಿ ವಾಸವಿದ್ದ ದುಷ್ಕರ್ಮಿಗಳನ್ನು ಇದೀಗ ಪೊಲೀಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ‌.

ದೇವಸ್ಥಾನ ಮುಂದೆ ಪಾನ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತಿದ್ದ ರುಕ್ಕಮ್ಮನ ಸಂಬಂಧಿಗಳಾದ ಇಬ್ಬರು ಯುವತಿಯರೊಂದಿಗೆ ಆರೋಪಿಗಳಿಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಪದೇ ಪದೆ ಅನೈತಿಕ ಚಟುವಟಿಕೆಗಾಗಿ ದೇವಸ್ಥಾನ ಬಳಿ ಸೇರುತಿದ್ದರು. ಇದಕ್ಕೆ ರುಕ್ಕಮ್ಮ ಅಡ್ಡಿ ಪಡಿಸುತಿದ್ದರು. ಹಾಗಾಗಿ ದೇವಸ್ಥಾನ ಆವರಣದಲ್ಲಿ ರುಕ್ಕಮ್ಮ ಮಲಗಿದ್ದ ವೇಳೆ ಆಕೆಯನ್ನು ಬರ್ಬರವಾಗಿ ಇಬ್ಬರು ಆರೋಪಿಗಳು ಹತ್ಯೆ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.