ETV Bharat / crime

ಯುವತಿಗೆ ಕಿರುಕುಳ ನೀಡಿ ಹಣ ದೋಚಿದ್ದ ಆರೋಪಿಗಳು ಅರೆಸ್ಟ್​ - two accused arrested by mangaluru police

ಬಸ್ ಇಳಿದು ಮನೆಗೆ ಹೋಗುತ್ತಿದ್ದ ಯುವತಿಯೊಬ್ಬಳಿಗೆ ಕಿರುಕುಳ ನೀಡಿ, ಆಕೆ ಬಳಿಯಿದ್ದ ಹಣ ದೋಚಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಅರೆಸ್ಟ್​
ಆರೋಪಿಗಳು ಅರೆಸ್ಟ್​
author img

By

Published : Mar 26, 2021, 12:38 PM IST

ಮಂಗಳೂರು: ಯುವತಿಯೊಬ್ಬಳು ಬಸ್​ನಿಂದ ಇಳಿದು ಮನೆಗೆ ಹೋಗುತ್ತಿದ್ದ ವೇಳೆ ಆಕೆಗೆ ಕಿರುಕುಳ ನೀಡಿ ಹಣ ದೋಚಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಿಹಾರ್​ ರಾಜ್ಯದ ಅರರಿಯ ಜಿಲ್ಲೆಯ ಅಜಯಕುಮಾರ್ ಮತ್ತು ಸುಬೋಧ ಕುಮಾರ್ ಬಂಧಿತರು. ಮಾರ್ಚ್ 23 ರಂದು ಯುವತಿಯೊಬ್ಬಳು ಮಂಗಳೂರಿನಿಂದ ಕೆಲಸ ಮುಗಿಸಿಕೊಂಡು ಜೋಕಟ್ಟೆ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಮನೆಗೆ ಹೋಗುತ್ತಿದ್ದ ವೇಳೆ ಆಕೆಗೆ ಕಿರುಕುಳ ನೀಡಿ, ಆಕೆಯ ಪರ್ಸ್​ನಲ್ಲಿದ್ದ 1 ಸಾವಿರ ರೂ. ದೋಚಿ ಆರೋಪಿಗಳು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.