ಲಿಂಗಸುಗೂರು: ತಾಲೂಕಿನ ಆಮದಿಹಾಳ ಬಳಿ ಶನಿವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ಮುದಗಲ್ಲದಿಂದ ಹುನಗುಂದ ಕಡೆಗೆ ಹೊರಟಿದ್ದ ಬೈಕ್ಗೆ ಹುನಗುಂದ ಕಡೆಯಿಂದ ಬರುತ್ತಿದ್ದ ಆಂದ್ರ ಮೂಲದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.
ಜಮಖಂಡಿ ಮೂಲದವರೆಂದು ಹೇಳಲಾಗುವ ಮೋಟರ್ ಬೈಕ್ ಸವಾರರು ಸ್ಥಳದಲ್ಲಿಯೆ ಮೃತಪಟ್ಟಿದ್ದು, ಇವರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ವಿಳಾಸ ಪತ್ತೆ ಕಾರ್ಯ ಆರಂಭಿಸಿದ್ದಾರೆ.