ಕೊಲ್ಲಂ (ಕೇರಳ): ಮಾನಸಿಕವಾಗಿ ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರು ತನ್ನ ಹಸುಗೂಸನ್ನೇ ಕೊಲೆ ಮಾಡಿರುವ ಘಟನೆ ಕೇರಳದ ಕೊಲ್ಲಂನ ಕುಂದಾರದಲ್ಲಿ ನಡೆದಿದೆ.
ಬಾಬುಲು ಹಾಗೂ ದಿವ್ಯಾ ದಂಪತಿಗೆ ಮೂರೂವರೆ ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಆದರೆ ಮಗು ಹುಟ್ಟಿದ ಬಳಿಕ ದಿವ್ಯಾ ಮಾನಸಿಕವಾಗಿ ಕುಗ್ಗಿದ್ದರು. ಮಗುವಿನ ನಾಮಕರಣದ ದಿನದಂದು ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಕೂಡ ಯತ್ನಿಸಿದ್ದರು.
ಇದನ್ನೂ ಓದಿ: ತಂದೆ ಚಲಾಯಿಸುತ್ತಿದ ಲಾರಿಯಡಿ ಸಿಲುಕಿ ಬಾಲಕ ದಾರುಣ ಸಾವು
ಆ ಬಳಿಕ ಕಂದಮ್ಮನನ್ನು ನೋಡಿಕೊಳ್ಳಲು ಮಹಿಳೆಯೊಬ್ಬರು ಕೆಲಸಕ್ಕೆ ಇಟ್ಟುಕೊಂಡಿದ್ದರು. ಆದರೆ, ಕೆಲ ದಿನಗಳ ಹಿಂದೆ ದಿವ್ಯಾ ತಾನು ಸರಿಯಾಗಿದ್ದು, ಬೇರೆಯವರ ಅಗತ್ಯವಿಲ್ಲ ಎಂದು ಹೇಳಿ ಆ ಮಹಿಳೆಯನ್ನು ಕಳುಹಿಸಿದ್ದರು. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವನ್ನು ಕತ್ತು ಹಿಸುಕಿ ಕೊಂದಿದ್ದು, ಕುಂದಾರ ಪೊಲೀಸರು ಆರೋಪಿ ದಿವ್ಯಾರನ್ನ ಬಂಧಿಸಿದ್ದಾರೆ.