ETV Bharat / crime

ಕ್ಷುಲ್ಲಕ ವಿಚಾರಕ್ಕೆ ಯುವಕರ ಮೇಲೆ ಆರ್‌ಎಸ್‌ಐ ಹಲ್ಲೆ!: ಹುಬ್ಬಳ್ಳಿ ಜನರ ಆಕ್ರೋಶ

ಕ್ಷುಲ್ಲಕ ಕಾರಣಕ್ಕೆ ವಾಹನ ಚಾಲಕನೊಬ್ಬನನ್ನು ಪೊಲೀಸರು ಹಿಗ್ಗಾ ಮುಗ್ಗಾ ಥಳಿಸಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಪೊಲೀಸ್‌ ಸಿಬ್ಬಂದಿಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

RSI attack on youth in Hubli for petty reasons; Outrage from people
ಕ್ಷುಲ್ಲಕ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಯುವಕರ ಮೇಲೆ ಆರ್‌ಎಸ್‌ಐ ಹಲ್ಲೆ!; ಜನರ ಆಕ್ರೋಶ
author img

By

Published : Oct 6, 2021, 7:53 PM IST

Updated : Oct 6, 2021, 8:42 PM IST

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಸಿಎಆರ್ ಇಲಾಖೆಯ ಆರ್‌ಎಸ್‌ಐ ಹಾಗೂ ನಾಲ್ವರು ಸಿಬ್ಬಂದಿ ವಾಹನ ಚಾಲಕನೊಬ್ಬನಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ರಟತ್ರಿ ಶ್ರೀಶೈಲ ಸಂಗಪ್ಪ ಕೇಶನೂರ ಗಾಯಗೊಂಡಿರುವ ಚಾಲಕ. ಗಾಯಾಳು ಗೋಕುಲ್ ರಸ್ತೆಯ ಕೆರೆ ಬಳಿ ತನ್ನ ವಾಹನವನ್ನು ತೊಳೆಯುತ್ತಿದ್ದಾಗ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಗೋಕುಲ್ ಗ್ರಾಮದ ಅಕ್ಕನ ಮನೆಯಲ್ಲಿರುವ ಶ್ರೀಶೈಲ, ಮಂಜುನಾಥನಗರ ಕ್ರಾಸ್‌ನಲ್ಲಿ ವಾಹನ ತೊಳೆಯುತ್ತಿದ್ದ ವೇಳೆ ಪೊಲೀಸ್ ಅಧಿಕಾರಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಇದರಿಂದ ಕೋಪಗೊಂಡ ಶ್ರೀಶೈಲ ಪೊಲೀಸ್ ಜೊತೆಗೆ ವಾದಕ್ಕೆ ಇಳಿದಿದ್ದಾನೆ. ಆಗ ಆರ್‌ಎಸ್‌ಐ ಪಿ.ರವಿಕುಮಾರ್ ತಮ್ಮ ಪೊಲೀಸ್ ಜೀಪ್‌ನಲ್ಲಿ ಸ್ಟೇಷನ್‌ಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಶ್ರೀಶೈಲ ಮತ್ತು ಮುದ್ದಪ್ಪ ಎಂಬ ಯುವಕನನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿರುವ ಆರೋಪ ಕೇಳಿ ಬಂದಿದೆ.

RSI attack on youth in Hubli for petty reasons; Outrage from people
ರಕ್ತ ಹೆಪ್ಪುಗಟ್ಟುವಂತೆ ಯುವಕನಿಗೆ ಥಳಿಸಿರುವ ಪೊಲೀಸರು

ಪೊಲೀಸ್ ಸಿಬ್ಬಂದಿಯ ಈ ನಡೆಯನ್ನು ಖಂಡಿಸಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೂಡಲೇ ಪೊಲೀಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಗೋಕುಲ ರೋಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Last Updated : Oct 6, 2021, 8:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.