ಪೂರ್ವ ಗೋದಾವರಿ: ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಐದು ತಿಂಗಳ ಮಗು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಕಾರಿನಲ್ಲಿದ್ದವರು ತಲ್ಲರೆವು ಮಂಡಲದಿಂದ ರಾಜಮಹೇಂದ್ರವರಂಗೆ ಹೋಗುತ್ತಿದ್ದ ವೇಳೆ ಪೂರ್ವ ಗೋದಾವರಿಯ ಪೆದ್ದಾಪುರಂ ಪಟ್ಟಣದ ಎಡಿಬಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇನ್ನೂ ಐವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಲವರ್ಗೋಸ್ಕರ ಹೆತ್ತ ತಾಯಿ ಕೊಲೆ ಮಾಡಿದ ಮಗಳು.. ಚಾಲಾಕಿ ಪ್ಲಾನ್ ಹೇಗಿತ್ತು ಗೊತ್ತಾ?
ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಕಾರಿನಿಂದ ಹೊರಕ್ಕೆ ತೆಗೆದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.