ವಾಷಿಂಗ್ಟನ್: ಅಮೆರಿಕದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದ್ದು, ಅಪರಿಚಿತ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಖ್ಯಾತ ರಾಪರ್ ಯಂಗ್ ಡಾಲ್ಫ್ (36) ಮೃತಪಟ್ಟಿದ್ದಾರೆ. ಟೆನ್ನೆಸ್ಸಿಯ ಮೆಂಫಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಮೆಂಫಿಸ್ ಮೇಯರ್ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಯಂಗ್ ಡಾಲ್ಫ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿರುವ ತನ್ನ ಸೋದರ ಸಂಬಂಧಿಯನ್ನು ನೋಡಲು ಡಾಲ್ಫ್ ಮೆಂಫಿಸ್‌ಗೆ ಬಂದಾಗ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಮೃತನ ಸಹೋದರಿ ಮರೆನೊ ಮೈಯರ್ಸ್ ವಿವರಿಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರವುದಾಗಿ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ 2 ಬಾರಿ ಗುಂಡಿನ ದಾಳಿ
ಲಾಸ್ ಏಂಜಲೀಸ್‌ನಲ್ಲಿ ರಾಪರ್ ಯಂಗ್ ಡಾಲ್ಫ್ ಮೇಲೆ 2017ರ ಫೆಬ್ರವರಿ ಹಾಗೂ ಸೆಪ್ಟೆಂಬರ್‌ನಲ್ಲಿ ಎರಡು ಭಾರಿ ಗುಂಡಿನ ದಾಳಿ ಮಾಡಲಾಗಿತ್ತು. 2008ರಿಂದ ರಾಪರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಇವರ ಪೇಪರ್ ರೂಟ್ ಕ್ಯಾಂಪೇನ್, ಕಿಂಗ್ ಆಫ್ ಮೆಂಫಿಸ್, ರಿಚ್ ಸ್ಲೇವ್ ಮೊದಲಾದ ಆಲ್ಬಂಗಳು ಜನಪ್ರಿಯವಾಗಿವೆ.