ETV Bharat / crime

2,000 ರೂಪಾಯಿ ಹಣಕ್ಕಾಗಿ ಚಾಕು ಇರಿದು ವ್ಯಕ್ತಿಯ ಬರ್ಬರ ಹತ್ಯೆ - ETv Bharat news

ತಾಳ್ಮೆ ಕಳೆದುಕೊಂಡು ಕೋಪದ ಕೈಗೆ ಬುದ್ದಿ ಕೊಟ್ಟರೆ ಏನೆಲ್ಲಾ ಅನಾಹುತಗಳು ಉಂಟಾಗುತ್ತವೆ ಎಂಬುದಕ್ಕೆ ಹೊಸ ನಿದರ್ಶನ ಸಿಕ್ಕಿದೆ. ಕೇವಲ 2 ಸಾವಿರ ರೂಪಾಯಿ ಹಣಕ್ಕಾಗಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Rajasthan, a man was killed over payment
ರಾಜಸ್ಥಾನದಲ್ಲಿ ಹಣ ಪಾವತಿ ವಿಚಾರಕ್ಕೆ ವ್ಯಕ್ತಿ ಕೊಲೆ
author img

By

Published : Nov 16, 2022, 9:27 AM IST

Updated : Nov 16, 2022, 9:40 AM IST

ರಾಜಸ್ಥಾನ: ಎರಡು ಸಾವಿರ ರೂಪಾಯಿ ಸಂಬಳಕ್ಕಾಗಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಘಟನೆ ಇಲ್ಲಿನ ಬರಾನ್ ಎಂಬಲ್ಲಿ ನಡೆದಿದೆ. ಚೋಮುಖ ಪ್ರದೇಶದ ನಿವಾಸಿ ನಿಖಿಲ್ ಶರ್ಮಾ (32) ಮೃತಪಟ್ಟ ಯುವಕ. ಘಟನೆಯಲ್ಲಿ ಈತನ ಮೂವರು ಸ್ನೇಹಿತರಿಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ: ಕಳೆದ ರಾತ್ರಿ 8.30 ರ ಸುಮಾರಿಗೆ ನಿಖಿಲ್ ಶರ್ಮಾ ತನ್ನ ಸ್ನೇಹಿತರಾದ ರವಿ (43), ಕುಲದೀಪ್ ಪಾಠಕ್ (40) ಮತ್ತು ರೋಹಿತ್ ಶರ್ಮಾ ಜತೆ ತನ್ನ ಮನೆಯ ಮುಂಭಾಗದ ಅಂಗಳದಲ್ಲಿ ಹರಟೆ ಹೊಡೆಯುತ್ತಿದ್ದನು. ಈ ಸಂದರ್ಭದಲ್ಲಿ ಅಲ್ಲಿಗೆ ಧಾವಿಸಿ ಬಂದ ಯುವಕರ ಗುಂಪು 2,000 ರೂಪಾಯಿ ಹಣಕ್ಕಾಗಿ ಗಲಾಟೆ ಮಾಡಿದೆ. ಈ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶರ್ಮಾ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಸ್ನೇಹಿತರು ರಕ್ಷಣೆಗೆ ಧಾವಿಸಿದಾಗ ಅವರ ಮೇಲೂ ದಾಳಿ ಮಾಡಲಾಗಿದೆ. ಗಾಯಗೊಂಡ ಶರ್ಮಾ ಹಾಗೂ ಸ್ನೇಹಿತರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶರ್ಮಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.

ಸಾವಿಗೂ ಮುನ್ನ ಪೊಲೀಸರು ಆತನ ಹೇಳಿಕೆ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜತೆಗೆ, ಸಾಮ್ರಾಟ್, ವಿರಾಟ್ ಮತ್ತು ತರುಣ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳು 20-25 ವಯಸ್ಸಿನವರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನಿನ್ನೆಯಷ್ಟೇ ಸಿಎಂ ಕಾರ್ಯಕ್ರಮದಲ್ಲಿ ಭಾಗಿ: ರಾತ್ರಿ ಮರ್ಮಾಂಗಕ್ಕೆ ಚಾಕು ಇರಿದು ಬಿಜೆಪಿ ಮುಖಂಡನ ಬರ್ಬರ ಹತ್ಯೆ

Last Updated : Nov 16, 2022, 9:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.