ETV Bharat / crime

ತಿರುಮಲ ಕಿಡ್ನ್ಯಾಪ್​ ಕೇಸ್​: ಆರೋಪಿಯ ಗುರುತು ಪತ್ತೆ ಮಾಡಿದ ಆಂಧ್ರ ಪೊಲೀಸರು​

ಆಂಧ್ರದ ತಿರುಮಲದಲ್ಲಿ ಛತ್ತೀಸ್​ಗಢ ಮೂಲದ ಬಾಲಕನನ್ನು ಅಪಹರಿಸಿದ್ದ ವ್ಯಕ್ತಿಯ ಕುಟುಂಬಸ್ಥರನ್ನು​ ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Police identifies accused of Tirumala kidnap case
ತಿರುಮಲ ಕಿಡ್ನ್ಯಾಪ್​ ಕೇಸ್​
author img

By

Published : Mar 12, 2021, 4:46 PM IST

ತಿರುಮಲ (ಆಂಧ್ರ ಪ್ರದೇಶ): ಛತ್ತೀಸ್​ಗಢ ಮೂಲದ ಬಾಲಕನ ಅಪಹರಣ ಪ್ರಕರಣದ ಆರೋಪಿಯ ಗುರುತು ಹಾಗೂ ಆತನ ಕುಟುಂಬದ ವಿಳಾಸವನ್ನು ಆಂಧ್ರ ಪ್ರದೇಶ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಫೆ. 27ರಂದು ಆಂಧ್ರದ ಚಿತ್ತೂರು ಜಿಲ್ಲೆಯ ತಿರುಮಲಕ್ಕೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಛತ್ತೀಸ್​ಗಢದ ಕುಟುಂಬವೊಂದು ಬಂದಿತ್ತು. ಆದರೆ ಈ ಕುಟುಂಬದ 6 ವರ್ಷದ ಬಾಲಕ ಕಾಣೆಯಾಗಿದ್ದ. ಪೋಷಕರ ದೂರಿನ ಮೇರೆಗೆ ತಿರುಪತಿ ನಗರ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು.

ಘಟನೆ ನಡೆದ ದಿನ ಬಸ್​ ನಿಲ್ದಾಣದ ಸಮೀಪ ಪೋಷಕರೊಂದಿಗೆ ನಿಂತಿದ್ದ ಬಾಲಕನ ಪಕ್ಕದಲ್ಲೇ ವ್ಯಕ್ತಿಯೊಬ್ಬ ಪತ್ರಿಕೆ ಓದುತ್ತಾ ಮಲಗಿದ್ದ. ಈತನೇ ಬಾಲಕನನ್ನು ಕಿಡ್ನ್ಯಾಪ್ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ತಿಳಿದು ಬಂದಿದೆ.

ಇದನ್ನೂ ಓದಿ: ಬಾಲಕನ ಅಪಹರಣ, ಕೊಲೆ ಪ್ರಕರಣ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ಆರೋಪಿಯನ್ನು ಚಿತ್ತೂರು ಜಿಲ್ಲೆಯ ವಿ.ಕೋಟಾ ಗ್ರಾಮದ ಶಿವಪ್ಪ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಬಾಲಕ ಹಾಗೂ ಆರೋಪಿ ಎಲ್ಲಿದ್ದಾರೆಂಬುದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಆರೋಪಿಯ ಕುಟುಂಬಸ್ಥರನ್ನು ಪೊಲೀಸ್​ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

ಅಪಹರಣ ಮಾಡಿದ ನಾಲ್ಕು ದಿನಗಳ ಹಿಂದಷ್ಟೇ ಆರೋಪಿ ಶಿವಪ್ಪನ ಮೊದಲನೇಯ ಮಗ ಮೃತಪಟ್ಟಿದ್ದ. ಇದೇ ವಿಚಾರಕ್ಕೆ ಮಾನಸಿಕವಾಗಿ ಕುಗ್ಗಿದ್ದ ಎಂದು ಶಿವಪ್ಪನ ಕುಟುಂಬಸ್ಥರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.