ಕೊಳ್ಳೇಗಾಲ(ಚಾಮರಾಜನಗರ) : ಸಾಲ ತೀರಿಸಲು ಹಣ ನೀಡದ ಹಿನ್ನೆಲೆಯಲ್ಲಿ ತಂದೆ ಎದುರೇ ಮಗ ಚಾಕುವಿನಿಂದ ಕತ್ತು ಮತ್ತು ಕೈ ಕೊಯ್ದುಕೊಂಡ ಘಟನೆ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಸುರೇಶ್‌ಕುಮಾರ್ ಎಂಬುವರ ಪುತ್ರ ಸಂತೋಷ್ ಕುಮಾರ್ ಎಂಬುವರು ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಸಂತೋಷ್ ರಂಗನಾಥನ ದೇವಾಲಯದ ದಾಸೋಹ ಭವನದಲ್ಲಿ ಅಡುಗೆ ಭಟ್ಟನಾಗಿ ಕಾರ್ಯ ನಿರ್ವಹಿಸುತ್ತಿದ್ದ.
ಇಂದು ಬೆಳಗ್ಗೆ ತನ್ನ ತಂದೆ-ತಾಯಿಗೆ ನನಗೆ ಸಾಲ ಇದೆ. ಸಾಲ ತೀರಿಸಲು 20 ಸಾವಿರ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದಾನೆ. ಹಣ ನೀಡಲು ಪೋಷಕ ನಿರಾಕರಿಸಿದ ಕಾರಣ ಚಾಕುವಿನಿಂದ ತನ್ನ ಕತ್ತು ಹಾಗೂ ಕೈಗೆ ಇರಿದು ಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ: ಖಾಸಗಿ ಬಸ್ಗಳ ಮಧ್ಯ ಅಪಘಾತ : ಹದಿನೈದು ಜನ ಪ್ರಯಾಣಿಕರಿಗೆ ಗಂಭೀರ ಗಾಯ