ಮುಂಬೈ (ಮಹಾರಾಷ್ಟ್ರ): ಕಾಳಸಂತೆಯಲ್ಲಿ 25 ಆಕ್ಸಿಜನ್ ಸಿಲಿಂಡರ್ಗಳು, 12 ಆಮ್ಲಜನಕ ಕಿಟ್‌ಗಳನ್ನು ಮಾರಾಟ ಮಾಡಲು ಹೊರಟಿದ್ದ 28 ವರ್ಷದ ಯುವಕನನ್ನು ಮುಂಬೈನ ಜೋಗೇಶ್ವರಿ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಫಿರೋಜ್ ಸಲೇಹ್ನಿಂದ ಪೊಲೀಸರು ವಶಪಡಿಸಿಕೊಂಡಿರುವ ಈ ಆಕ್ಸಿಜನ್ ಸಿಲಿಂಡರ್-ಕಿಟ್ಗಳ ವೆಚ್ಚ ಸುಮಾರು 7 ಲಕ್ಷ ರೂ. ಆಗಿದೆ. ಇವುಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಂತರ್ಜಿಲ್ಲಾ ಮೊಬೈಲ್ ಕಳ್ಳರ ಬಂಧನ.. ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೂ. ಮೌಲ್ಯದ 22 ಫೋನ್ಗಳು ವಶಕ್ಕೆ
ಈ ಸಂಬಂಧ ಒಶಿವಾರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಕಾಳಸಂತೆಯಲ್ಲಿ ಭಾಗಿಯಾಗಿರುವ ಫಿರೋಜ್ ಸಲೇಹ್ ತಂದೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.