ಡೆಹ್ರಾಡೂನ್: ಮುಸ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸಿ ಮಾರಾಟ ಮಾಡುವ ರೀತಿಯಲ್ಲಿ ಬಿಂಬಿಸುತ್ತಿದ್ದ 'ಬುಲ್ಲಿ ಬಾಯಿ' ಆ್ಯಪ್ ಪ್ರಕರಣದ ತನಿಖೆಯನ್ನು ಮುಂಬೈ ಸೈಬರ್ ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಉತ್ತರಾಖಂಡ್‌ನಲ್ಲಿಂದು ಪ್ರಮುಖ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆ 'ಬುಲ್ಲಿ ಬಾಯಿ' ಆ್ಯಪ್‌ಗೆ ಸಂಬಂಧಿಸಿದ ಮೂರು ಖಾತೆಗಳನ್ನು ನಿರ್ವಹಿಸುತ್ತಿದ್ದಳು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ವಿಶಾಲ್ ಕುಮಾರ್ 'ಖಾಲ್ಸಾ ಸುಪ್ರಿಮಾಸಿಸ್ಟ್' ಹೆಸರಿನಲ್ಲಿ ಖಾತೆ ತೆರೆದಿದ್ದ ಎನ್ನಲಾಗ್ತಿದೆ.
ಸೋಮವಾರವಷ್ಟೇ ಮುಂಬೈ ಸೈಬರ್ ಪೊಲೀಸರು 21 ವರ್ಷದ ವಿಶಾಲ್ ಕುಮಾರ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿ ಮುಂಬೈಗೆ ಕರೆದೊಯ್ದಿದ್ದಾರೆ. ಆ್ಯಪ್‌ನ ಐವರು ಫಾಲೋವರ್‌ಗಳ ಪೈಕಿ ಈತನು ಒಬ್ಬನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗಿಟ್‌ಹಬ್ ಪ್ಲಾಟ್‌ಫಾರ್ಮ್ ಮೂಲಕ ಈ ವಿವಾದಿತ ಬುಲ್ಲಿ ಬಾಯ್ ಆ್ಯಪ್ ಬಿಡುಗಡೆ ಮಾಡಲಾಗಿತ್ತು. ಆ ಆ್ಯಪ್‌ನ ಮುಖ್ಯಸ್ಥರು ಯಾರೆಂಬುದನ್ನು ತಿಳಿಸುವಂತೆ ಆ್ಯಪ್‌ಗೆ ವೇದಿಕೆ ಕಲ್ಪಿಸಿದ್ದ ಗಿಟ್‌ಹಬ್‌ಗೆ ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿ ಪುಂಡಾಟ ಆರೋಪ; 'ಬುಲ್ಲಿ ಬಾಯಿ' ಆ್ಯಪ್‌ಗೆ ನಿರ್ಬಂಧ