ETV Bharat / crime

1992 ಗಲಭೆ ಪ್ರಕರಣ.. ಬರೋಬ್ಬರಿ 30 ವರ್ಷಗಳ ನಂತರ ಆರೋಪಿ ಸೆರೆ - ಉಳಿದ ಆರೋಪಿಗಳ ಪತ್ತೆಗೆ ಬಲೆ

ಮಹಾರಾಷ್ಟ್ರ ಪೊಲೀಸರು ಗಲಭೆ ಪ್ರಕರಣದ ಆರೋಪಿಯೊಬ್ಬನನ್ನು ಸುಮಾರು 30 ವರ್ಷಗಳ ಬಳಿಕ ಸೆರೆ ಹಿಡಿದಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

1992 riot case  Mumbai man arrested after 30 years  Mumbai man absconding in 1992 riot  i man absconding in 1992 riot case arrested  1992 ಗಲಭೆ ಪ್ರಕರಣ  30 ವರ್ಷಗಳ ನಂತರ ಆರೋಪಿ ಸೆರೆ  ಉಳಿದ ಆರೋಪಿಗಳ ಪತ್ತೆಗೆ ಬಲೆ  ದಿಂಡೋಶಿ ಪೊಲೀಸ್ ಠಾಣಾ ವ್ಯಾಪ್ತಿ
ಬರೋಬ್ಬರಿ 30 ವರ್ಷಗಳ ನಂತರ ಆರೋಪಿ ಸೆರೆ
author img

By

Published : Dec 12, 2022, 10:07 AM IST

ಮುಂಬೈ(ಮಹಾರಾಷ್ಟ್ರ): 1992ರ ಗಲಭೆ ಪ್ರಕರಣದ ಆರೋಪಿಯೊಬ್ಬ ವೇಷ ಬದಲಿಸಿಕೊಂಡು ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಳ್ಳುತ್ತಿದ್ದ. 47 ವರ್ಷದ ಈ ಆರೋಪಿಯನ್ನು ಕೊನೆಗೂ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅದು ಬರೋಬ್ಬರಿ 30 ವರ್ಷಗಳ ಬಳಿಕ ಅನ್ನೋದು ವಿಶೇಷ.

1992 ರಲ್ಲಿ ದಿಂಡೋಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಭೆಯೊಂದು ನಡೆದಿತ್ತು. ಈ ವೇಳೆ ದಾಖಲಿಸಿದ್ದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್‌) ಪೊಲೀಸರು ಒಂಬತ್ತು ಆರೋಪಿಗಳನ್ನು ಹೆಸರಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಳಿದ ಆರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಈ ಆರೋಪಿಗಳ ವಿರುದ್ಧ 2004ರಲ್ಲಿ ವಾರೆಂಟ್ ಜಾರಿ ಮಾಡಲಾಗಿತ್ತು. ಬಂಧಿತ ಆರೋಪಿಗಳು ಕಳೆದ 18 ವರ್ಷಗಳಿಂದ ತಮ್ಮ ಗುರುತುಗಳನ್ನು ಬದಲಿಸಿಕೊಂಡು ಉಪನಗರದ ವಿವಿಧೆಡೆ ವಾಸಿಸುತ್ತಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆದಷ್ಟು ಬೇಗ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಓದಿ: ತಿಂಗಳಿಗೊಂದು ಬಲಿ ಪಡೆಯುತ್ತಿದ್ದ ಕಾಡಾನೆ ಭೈರ ಕೊನೆಗೂ ಸೆರೆ.. ಮೂಡಿಗೆರೆ ಜನ ನಿರಾಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.