ಕಡಬ: ಚಲಿಸುತ್ತಿದ್ದ ಸ್ಕೂಟರೊಂದು ಸ್ಕಿಡ್ ಆದ ಪರಿಣಾಮ ಸವಾರ ಆಯತಪ್ಪಿ ಪಕ್ಕದಲ್ಲೇ ಇದ್ದ ಚರಂಡಿಗೆ ಉರುಳಿ ಬಿದ್ದು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲ ಎಂಬಲ್ಲಿ ನಡೆದಿದೆ.
ಮೃತ ಸವಾರನನ್ನು ಕಡಬ ತಾಲೂಕಿನ ನೆಕ್ಕಿತ್ತಡ್ಕ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಖಲೀಲ್ ಎಂದು ಗುರುತಿಸಲಾಗಿದೆ.
ಖಲೀಲ್ ಅವರು ತನ್ನ ಸ್ನೇಹಿತನ ದ್ವಿಚಕ್ರ ವಾಹನದಲ್ಲಿ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದಾಗ ಕೊಯಿಲ ಎಂಬಲ್ಲಿ ಸ್ಕೂಟರ್ ಚರಂಡಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಮೃತನ ದೆಹವನ್ನು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪೊಲೀಸರ ಮೇಲೆ ತಲವಾರು ದಾಳಿ ನಡೆಸಿದ್ದ ರೌಡಿಶೀಟರ್ ಬಂಧನ