ಬೆಂಗಳೂರು: ಕುತ್ತಿಗೆಗೆ ನಾಯಿ ಕಚ್ಚಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಬೆಂಗಳೂರು ಯಲಹಂಕ ನ್ಯೂಟೌನ್ ಪೊಲೀಸ್ ವ್ಯಾಪ್ತಿಯ ಅಟ್ಟೂರು ಲೇಔಟ್‌ನಲ್ಲಿ ಈ ಘಟನೆ ಸಂಭವಿಸಿದೆ.
ಓದಿ: ಗಂಗಾ ನದಿಯಲ್ಲಿ ಮತ್ತೆ ತೇಲಿದ ಶವಗಳು..ಯುಪಿ - ಬಿಹಾರ್ ಗಡಿಯಲ್ಲಿ 15-20 ಶವಗಳು ಪತ್ತೆ
ನರಸಿಂಹ ಎಂಬಾತ ನಾಯಿ ಕಚ್ಚಿ ಸಾವನ್ನಪ್ಪಿದ ವ್ಯಕ್ತಿ. ಈತ ಅಟ್ಟೂರು ಲೇಔಟ್‌ನಲ್ಲಿ ಗಾರೆ ಕೆಲಸ ಮಾಡುತ್ತಿದ್ದ, ಈ ವೇಳೆ ನಾಯಿ ವಾಕಿಂಗ್‌ಗೆ ಎಂದು ಪಕ್ಕದ ಮನೆಯ ಹೆಂಗಸು ಕರೆದುಕೊಂಡು ಬಂದಿದ್ದಾಳೆ. ಆಕೆಯಿಂದ ತಪ್ಪಿಸಿಕೊಂಡ ನಾಯಿ ಗಾರೆ ಕೆಲಸಗಾರ ನರಸಿಂಹನ ಕುತ್ತಿಗೆ ಕಚ್ಚಿದ್ದು, ತೀವ್ರ ರಕ್ತ ಸ್ರಾವದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ನರಸಿಂಹನ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.