ETV Bharat / crime

ಎದೆ ನೋವಿಗಾಗಿ ಆಸ್ಪತ್ರೆ ಸೇರಿದ್ದ ವ್ಯಕ್ತಿ ಸಾವು; ವೈದ್ಯನ ಕಾರು ಗಾಜು ಪುಡಿ ಮಾಡಿ ಆಕ್ರೋಶ - ರಾಣೆಬೆನ್ನೂರು

ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊರ್ವ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಸಂಬಂಧಿಕರು ವೈದ್ಯನ ಕಾರಿನ ಗಾಜನ್ನು ಪುಡಿ ಪುಡಿ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಿನ್ನೆ ರಾತ್ರಿ ನಡೆದಿದೆ.

man admitted to hospital for chest pain and later died; Relatives smash glass of doctor's car
ಎದೆ ನೋವಿಗಾಗಿ ಆಸ್ಪತ್ರೆ ಸೇರಿದ್ದ ವ್ಯಕ್ತಿ ಸಾವು; ವೈದ್ಯನ ಕಾರಿನ ಗಾಜು ಪುಡಿ ಮಾಡಿ ಸಂಬಂಧಿಕರ ಆಕ್ರೋಶ
author img

By

Published : Jun 25, 2021, 5:06 AM IST

ರಾಣೆಬೆನ್ನೂರು(ಹಾವೇರಿ): ಎದೆನೋವು ಅಂತಾ ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಮೃತನ ಸಂಬಂಧಿತಕರು ವೈದ್ಯನ ಕಾರಿನ ಗಾಜನ್ನು ಪುಡಿ ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ.

55 ವರ್ಷದ ಖಾಜಾಮೋದ್ದೀನ್ ಸಾಬ ಎದೆನೋವಿಗಾಗಿ ಮಾರುತಿನಗರದ ಬೆಂಚನಮರಡಿಯಲ್ಲಿರುವ ಡಾ.ಸುನೀಲ ಆಸ್ಪತ್ರೆ ದಾಖಲಾಗಿದ್ದಾನೆ. ಆದ್ರೆ ಖಾಜಾಮೋದ್ದೀನ್ ಸಾಬನನ್ನು ಹೆಚ್ಚಿನ ಚಿಕಿತ್ಸೆಗಾಗಿ ತನ್ನದೇ ಕಾರಿನಲ್ಲಿ ವೈದ್ಯ ಡಾ.ಸುನೀಲ್‌, ಓಂ ಆಸ್ಪತ್ರೆಗೆ ಕರೆ ತಂದಿದ್ದಾರೆ. ಖಾಜಾಮೋದ್ದೀನ್ ಸಾಬ ಮೃತಪಟ್ಟಿರುವುದನ್ನು ಓಂ ಆಸ್ಪತ್ರೆ ವೈದ್ಯರು ಖಾತ್ರಿ ಪಡಿಸಿದ್ದಾರೆ.

ಈ ವೇಳೆ ಸಿಟ್ಟಿಗೆದ್ದ ಮೃತನ ಸಂಬಂಧಿತರು ಡಾ.ಸುನೀಲ್‌ ಅವರ ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ರಾಣೆಬೆನ್ನೂರು ನಗರ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.