ETV Bharat / crime

ಕೇರಳ ಮಾಡೆಲ್‌ಗಳ ಸಾವಿಗೆ ಸ್ಫೋಟಕ ಟ್ವಿಸ್ಟ್‌; ಕಾರು ಅಪಘಾತಕ್ಕೆ ಡ್ರಗ್‌ ಪೆಡ್ಲರ್‌ ಕಾರಣ! - ಮಾಡೆಲ್‌ಗಳ ಸಾವಿಗೆ ಡ್ರೆಗ್‌ ಪೆಡ್ಲರ್‌ ಕಾರಣ

Kerala Model Death: ಕೇರಳದ ಇಬ್ಬರು ಮಾಡೆಲ್‌ಗಳ ಸಾವಿನ ಕುರಿತು ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಒಬ್ಬ ಡ್ರಗ್‌ ಪೆಡ್ಲರ್‌ ಮಾಡೆಲ್‌ಗಳು ಇದ್ದ ಕಾರನ್ನು ಹಿಂಬಾಲಿಸಿದ್ದೇ ಸಾವಿನಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

kerala model death case drug addict is the culprit
ಕೇರಳದ ಇಬ್ಬರು ಮಾಡೆಲ್‌ಗಳ ಸಾವಿಗೆ ಸ್ಫೋಟಕ ಟ್ವಿಸ್ಟ್‌; ಕಾರು ಅಪಘಾತಕ್ಕೆ ಡ್ರಗ್‌ ವ್ಯಸನಿ ಕಾರಣ!
author img

By

Published : Dec 2, 2021, 3:46 PM IST

ಕೊಚ್ಚಿ(ಕೇರಳ): ಕಳೆದೊಂದು ತಿಂಗಳ ಹಿಂದೆ ಕೊಚ್ಚಿಯಲ್ಲಿ ಇಬ್ಬರು ಮಾಡೆಲ್‌ಗಳು ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್‌ ಸಿಕ್ಕಿದ್ದು, ಡ್ರಗ್‌ ಪೆಡ್ಲರ್‌ನಿಂದಲೇ ರೂಪದರ್ಶಿಯರು ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಡ್ರಗ್‌ ಪೆಡ್ಲರ್‌ ಸೈಜು ತಂಕಚನ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಅಕ್ಟೋಬರ್ 31ರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಕೇರಳದ ಮಾಜಿ ಸುಂದರಿ ಅನ್ಸಿ ಕಬೀರ್ (24) ಮತ್ತು ರನ್ನರ್ ಅಪ್ ಅಂಜನಾ ಶಾಜನ್ (25) ಮೃತಪಟ್ಟಿದ್ದರು.

ಈ ಇಬ್ಬರು ಪ್ರಯಾಣಿಸುತ್ತಿದ್ದ ಕಾರು ಕೊಚ್ಚಿ ಬಳಿಯ ವೈಟಿಲ್ಲಾ ಎಂಬಲ್ಲಿ ಅಪಘಾತಕ್ಕೀಡಾಗಿತ್ತು. ವೇಗವಾಗಿ ಚಲಿಸುತ್ತಿದ್ದಾಗ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಇವರು ಪಲ್ಟಿಯಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ವಾರದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ವಾಹನ ಚಲಾಯಿಸುತ್ತಿದ್ದ ಅವರ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಪಾರ್ಟಿಗೆ ಬಂದಿದ್ದ ಡ್ರಗ್‌ ಪೆಡ್ಲರ್‌ ಸೈಜು ತಂಕಚನ್‌

ಅಕ್ಟೋಬರ್ 31 ರಂದು ಆನ್ಸಿ ಮತ್ತು ಅಂಜನಾ ತಮ್ಮ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದರು. ಆರೋಪಿ ಸೈಜು ತಂಕಚನ್ ಕೂಡ ಅಲ್ಲಿಗೆ ಬಂದಿದ್ದಾನೆ. ಈ ವೇಳೆ, ಆರೋಪಿ ರೂಪದರ್ಶಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ರಾತ್ರಿ ಹೊಟೇಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾನೆ.

ಆದರೆ, ಇಬ್ಬರು ಮಾಡೆಲ್‌ಗಳು ತಮ್ಮ ಸ್ನೇಹಿತರೊಂದಿಗೆ ಹೋಟೆಲ್‌ನಿಂದ ಹೊರಬಂದು ಕಾರಿನಲ್ಲಿ ಮನೆಗೆ ತೆರಳಿದ್ದಾರೆ. ಸೈಜು ಅವರನ್ನು ಹಿಂಬಾಲಿಸಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಸ್ನೇಹಿತ ವೇಗವಾಗಿ ಕಾರು ಚಲಾಯಿಸಲು ಆರಂಭಿಸಿದ್ದೇ ಭೀಕರ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಸಾಕ್ಷ್ಯ ನಾಶಪಡಿಸಲಾಗಿದ್ದು, ಇದರಿಂದ ಹೋಟೆಲ್ ಮಾಲೀಕರು ಭಯಗೊಂಡಿದ್ದಾರೆ ಎಂದು ಅಂಜನಾ ಸಹೋದರ ಅರ್ಜುನ್ ಆರೋಪಿಸಿದ್ದಾರೆ. ಸಂತ್ರಸ್ತೆಯ ಕುಟುಂಬದವರು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: 2019ರ Miss Kerala ಅನ್ಸಿ, Runner up ಅಂಜನಾ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.