ಬೆಂಗಳೂರು: ಅದು ಅಕ್ಷರಶಃ ಸಿನಿಮೀಯ ಶೈಲಿಯ ಕಳ್ಳ ಪೊಲೀಸ್ ಚೇಸಿಂಗ್. ಸುಮಾರು ನಾಲ್ಕು ಗಂಟೆಗಳ ನಡೆದ ಕಾಲ ನಡೆದ ಈ ಕಳ್ಳ ಪೊಲೀಸ್ ಆಟದಲ್ಲಿ ಕೊನೆಗೂ ಪೊಲೀಸರು ನಟೋರಿಯಸ್ ಮನೆಗಳ್ಳನ ಬಂಧಿಸಿದ್ದಾರೆ.
ನಟೋರಿಯಸ್ ಮನೆಗಳ್ಳನಾಗಿರುವ ಇಸ್ಮಾಯಿಲ್ ಅಲಿಯಾಸ್ ಮಹಮ್ಮದ್ ಫಾಜಿಲ್ ಡಿಜೆ ಹಳ್ಳಿ ನಿವಾಸಿ. ಜಯನಗರ ಪೊಲೀಸರನ್ನ ಕಳೆದೊಂದು ವಾರದಿಂದ ಈ ನಟೋರಿಯಸ್ ಅಕ್ಷರಶಃ ಕಾಡಿಬಿಟ್ಟಿದ್ದ. ಜಯನಗರ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ ಅಂಗಡಿಗಳನ್ನೆಲ್ಲ ಒಂದೊಂದಾಗೆ ದೋಚುತ್ತಿದ್ದ. ಈ ಕುಖ್ಯಾತ ಮನೆಗಳ್ಳ ಹಾಗೂ ಇವನ ಗ್ಯಾಂಗ್ ಬಗ್ಗೆ ಮಾಹಿತಿ ಪಡೆದ ಪೊಲೀಸರು ನಿನ್ನೆ ಸತತ ನಾಲ್ಕು ಗಂಟೆಗಳ ಕಾಲ ಸಿನಿಮೀಯ ರೀತಿ ಚೇಸ್ ಮಾಡಿ ಕೊನೆಗೆ ಇಸ್ಮಾಯಿಲ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಇದನ್ನೂ ಓದಿ: ನಿಂತಿದ್ದ ಲಾರಿಗೆ ಗುದ್ದಿದ ಮತ್ತೊಂದು ಲಾರಿ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ
ಜಯನಗರ, ಜೆ.ಪಿ.ನಗರ ಹಾಗೂ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೇಗೆ ಮನೆಗಳ್ಳತನ ಪ್ರಕರಣಗಳ ಹೆಚ್ಚಾಗಿದ್ದವು. ಪೀಟರ್ ಇಂಗ್ಲೆಂಡ್, ಸೋಚ್ನಂತಹ ಅಂಗಡಿಗಳಲ್ಲೂ ಕಳ್ಳತನ ನಡೆದಿತ್ತು. ಹೀಗಾಗಿ ಆರೋಪಿ ಪತ್ತೆಗೆ ಜಯನಗರ ಇನ್ಸ್ಪೆಕ್ಟರ್ ಸುದರ್ಶನ್ ಹಾಗೂ ತಂಡ ಟೊಂಕ ಕಟ್ಟಿ ನಿಂತಿತ್ತು. ಹೀಗಿರುವಾಗ ನಿನ್ನೆ ಗ್ಯಾಂಗ್ ಎರಡು ಕಡೆ ಮನೆಗಳ್ಳತನ ಹಾಗೂ ಎರಡು ಕಡೆ ಕಳ್ಳತನ ಯತ್ನ ಮಾಡಿರುವ ಮಾಹಿತಿ ಸಂಗ್ರಹಿಸಿದ ಇನ್ಸ್ಸ್ಪೆಕ್ಟರ್ ಸುದರ್ಶನ್ ಮತ್ತು ಅವರ ತಂಡ ಬಂಧನಕ್ಕೆ ತೆರಳಿತ್ತು. ಆದರೆ ಆರೋಪಿಗಳು ಪೊಲೀಸರನ್ನು ಕಂಡಕೂಡಲೇ ಎಸ್ಕೇಪ್ ಆಗಲು ಶುರು ಮಾಡಿದರು.
ಈ ವೇಳೆ ಇಸ್ಮಾಯಿಲ್ನ ಇಬ್ಬರು ಸಹಚರರು ಸಿಕ್ಕಿ ಬಿದ್ದರು. ಆದರೆ, ಇಸ್ಮಾಯಿಲ್ ಮಾತ್ರ ಸುಲಭವಾಗಿ ಪೊಲೀಸ್ ಬಲೆಗೆ ಬಿದ್ದಿಲ್ಲ. ಹೀಗೆ ತಪ್ಪಿಸಿಕೊಳ್ಳುವಾಗ ಸೆಕ್ಯೂರಿಟಿ ಗಾರ್ಡ್ ಒಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ. ಸತತ ನಾಲ್ಕು ಗಂಟೆ ಕಳ್ಳ ಪೊಲೀಸ್ ಆಟ ನಡೆದಿದೆ. ಕೊನೆಗೆ ಸಿಕ್ಕಿ ಬೀಳುತ್ತೇನೆ ಎನ್ನೋವಾಗ ಕಾನ್ ಸ್ಟೇಬಲ್ ಪ್ರದೀಪ್ ಎಂಬುವರ ಮೇಲೂ ಹಲ್ಲೆ ಮಾಡಿದ್ದಾನೆ. ಈ ವೇಳೆ ಇನ್ಸಪೆಕ್ಟರ್ ಸುದರ್ಶನ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.