ಮುಂಬೈ: ಕಿರುತೆರೆ ನಟಿ ತುನಿಶಾ ಶರ್ಮಾ ಸಾವು ಟೆಲಿವಿಷನ್ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಅವರ ಅಕಾಲಿಕ, ನಿಗೂಢ ಸಾವು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ, ಆಕೆ ಗರ್ಭವತಿ ಆಗಿದ್ದರು ಎಂಬ ಶಂಕೆ ಮೂಡಿದೆ.
ಇದರ ನಡುವೆ ನಟಿಯ ಮರಣೋತ್ತರ ಪರೀಕ್ಷೆಯಲ್ಲಿ ತುನಿಶಾ ಆಕೆ ಗರ್ಭಿಣಿ ಆಗಿರಲಿಲ್ಲ. ಅವರು ನೇಣಿಗೆ ಶರಣಾಗಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ವರದಿ ತಿಳಿಸಿದೆ. 20 ವರ್ಷದ ನಟಿ ತಮ್ಮ ಸಹ ಕಲಾವಿದ ಜೊತೆಗೆ ಬಾಯ್ಫ್ರೆಂಡ್ ಶೀಝಾನ್ ಮಹಮ್ಮದ್ ಖಾನ್ ಅವರ ಮೇಕಪ್ ರೂಂನಲ್ಲಿ ಡಿಸೆಂಬರ್ 24ರಂದು ಆತ್ಮಹತ್ಯೆ ಮಾಡುಇ ಶರಣಾಗಿದ್ದರು.
ಆಲಿ ಬಾಬಾ ಶೋನಲ್ಲಿ ಕಾಣಿಸಿಕೊಂಡ ಜೋಡಿ: ದಾಸ್ತಾನ್ ಇ- ಕಬೂಲ್ ಶೀಜನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. ತುನಿಶಾ ತಾಯಿ ದೂರು ದಾಖಲಿಸಿದ್ದು, ನಟನನಿಂದ ಮಗಳು ಮಾನಸಿಕವಾಗಿ ಒತ್ತಡಕ್ಕೆ ಗುರಿಯಾಗಿದ್ದಳು ಎಂದು ತಿಳಿಸಿದ್ದಾರೆ.
ಜೆಜೆ ಆಸ್ಪತ್ರೆಯಲ್ಲಿ ತುನಿಶಾ ಮರಣೋತ್ತರ ಪರೀಕ್ಷೆ ನಡೆದಿದ್ದು, ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ನಟಿಯ ದೇಹದಲ್ಲಿ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ ಎಂದು ತಿಳಿಸಲಾಗಿದೆ. ವರದಿ ಅನುಸಾರ ತುನಿಶಾ ಅಂತ್ಯ ಸಂಸ್ಕಾರ ಇಂದು ನೆರವೇರಲಿದೆ.
ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ತುನಿಶಾ ಖಿನ್ನತೆಗೆ ಒಳಗಾಗಿದ್ದರು. ಪಾಂಡ್ಯಾ ಸ್ಟೋರ್ ನಟ ಕನ್ವರ್ ದಿಲೊನ್ ಅವರ ಬೆಂಬಲ ಪಡೆದಿದ್ದರು. ಆತ್ಮಹತ್ಯೆಗೆ ಶರಣಾಗಿದ್ದ ತುನಿಶಾರನ್ನು ಈತನೇ ಆಕೆಯನ್ನು ತಕ್ಷಣಕ್ಕೆ ಆಸ್ಪತ್ರೆಗೆ ಕರೆತಂದಿದ್ದಾನೆ.
ಇದನ್ನೂ ಓದಿ: ನಟಿ ತುನಿಶಾ ಶರ್ಮಾ ಆತ್ಮಹತ್ಯೆ: ಸಹನಟ ಶೀಝಾನ್ ಖಾನ್ ಪೊಲೀಸ್ ಕಸ್ಟಡಿಗೆ