ETV Bharat / crime

ಕಟಿಂಗ್ ಪ್ಲೇಯರ್​ನಿಂದ ಪತ್ನಿಯ ಉಗುರು ಕಿತ್ತ ಪಾಪಿ - ಕಟಿಂಗ್ ಪ್ಲೇಯರ್​ನಿಂದ ಪತ್ನಿಯ ಉಗುರು ಕಿತ್ತ

ವರದಕ್ಷಿಣೆಗಾಗಿ ದುಷ್ಟನೊಬ್ಬ ತನ್ನ ಪತ್ನಿಯ ಉಗುರುಗಳನ್ನೇ ಕಿತ್ತು ಹಾಕಿದ್ದಾನೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ವರದಕ್ಷಿಣೆ ಕಲಂ 498, ಹಲ್ಲೆ ಪ್ರಕರಣ 323 ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ.

husband-uprooted-wife-toe-nails-b
ಕಟಿಂಗ್ ಪ್ಲೇಯರ್​ನಿಂದ ಪತ್ನಿಯ ಉಗುರು ಕಿತ್ತ ಪಾಪಿ
author img

By

Published : Sep 8, 2022, 4:36 PM IST

Updated : Sep 8, 2022, 4:43 PM IST

ಫರೀದಾಬಾದ್: ಕೈಗಾರಿಕಾ ನಗರ ಫರೀದಾಬಾದ್​ನಲ್ಲಿ ಎಂಥವರೂ ಬೆಚ್ಚಿ ಬೀಳುವಂಥ ಘಟನೆಯೊಂದು ನಡೆದಿದೆ. ಇಲ್ಲಿನ ಪಲ್ಲಾ ಎಂಬ ಪ್ರದೇಶದಲ್ಲಿ ವರದಕ್ಷಿಣೆಗಾಗಿ ದುಷ್ಟನೊಬ್ಬ ತನ್ನ ಪತ್ನಿಯ ಉಗುರುಗಳನ್ನೇ ಕಿತ್ತು ಹಾಕಿದ್ದಾನೆ. ಈತ ತನ್ನ ತಂದೆ ಹಾಗೂ ಸಹೋದರನ ಜೊತೆಗೂಡಿ ಕಟಿಂಗ್ ಪ್ಲೇಯರ್​ನಿಂದ ಪತ್ನಿಯ ಕಾಲಿನ ಹೆಬ್ಬೆರಳ ಉಗುರುಗಳನ್ನು ಕಿತ್ತು ಪೈಶಾಚಿಕವಾಗಿ ವಿಕೃತಿ ಮೆರೆದಿದ್ದಾನೆ. ಪತ್ನಿ ವರದಕ್ಷಿಣೆ ತರಲ್ಲ ಅಂದಿದ್ದಕ್ಕೆ ಮಾನವೀಯತೆ ಮರೆತ ದುಷ್ಟರು ಇಂಥ ಕೃತ್ಯವೆಸಗಿದ್ದಾರೆ.

ಸಂತ್ರಸ್ತ ಮಹಿಳೆಯು ಹೇಳುವ ಪ್ರಕಾರ, 13 ವರ್ಷಗಳ ಹಿಂದೆ ಆಕೆಯ ವಿವಾಹ ಧೀರಜ್ ನಗರದ ರಾಜೇಶ್ ಎಂಬಾತನೊಂದಿಗೆ ನಡೆದಿತ್ತು. ವಿವಾಹ ನಡೆದು ಕೆಲ ದಿನಗಳವರೆಗೆ ಎಲ್ಲವೂ ಚೆನ್ನಾಗಿ ನಡೆದಿತ್ತು. ಆದರೆ, ನಂತರ ಪತಿ ಸಿಕ್ಕಾಪಟ್ಟೆ ಹಿಂಸಿಸಿ ಹೊಡೆಯಲಾರಂಭಿಸಿದ್ದಾನೆ. ತವರಿನಿಂದ 4 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಪೀಡಿಸತೊಡಗಿದ್ದಾನೆ.

ರವಿವಾರವೂ ಇದೇ ರೀತಿ ವರದಕ್ಷಿಣೆಗಾಗಿ ಪೀಡಿಸತೊಡಗಿದ್ದಾನೆ. ಆದರೆ, ಹಣ ತರಲು ಆಗಲ್ಲ ಎಂದಿದ್ದಕ್ಕೆ ಕೋಪಗೊಂಡ ಆತ ಕಟಿಂಗ್ ಪ್ಲೇಯರ್ ತಂದು ಉಗುರುಗಳನ್ನು ಕೀಳಲಾರಂಭಿಸಿದ್ದಾನೆ. ಆಗ ಮಹಿಳೆಯ ಆರ್ತನಾದ ಕೇಳಿ ಸುತ್ತ ಮುತ್ತಲಿನವರು ಜಮಾಯಿಸಿದಾಗ ಪತಿ ಪರಾರಿಯಾಗಿದ್ದಾನೆ. ಇದರ ನಂತರ ಮಹಿಳೆಯ ತವರು ಮನೆಯವರು ಬಂದು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ವರದಕ್ಷಿಣೆ ಕಲಂ 498, ಹಲ್ಲೆ ಪ್ರಕರಣ 323 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆದರೆ ಈ ಮಧ್ಯೆ ಪೊಲೀಸರು ತನ್ನ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಅಥವಾ ತನ್ನ ಹೇಳಿಕೆಯನ್ನು ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದಿಲ್ಲ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

ಪೊಲೀಸರು ತನ್ನ ಪತಿ, ಸೋದರ ಮಾವ ಮತ್ತು ಮಾವನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ. ಸಂತ್ರಸ್ತೆಯು ತಾನು ಇನ್ನು ಮುಂದೆ ತನ್ನ ಪತಿಯೊಂದಿಗೆ ವಾಸಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ವಿರುದ್ಧ ರಾಜ್ಯಪಾಲರಿಂದಲೇ ಉಪವಾಸ ಸತ್ಯಾಗ್ರಹ: ಇತಿಹಾಸದಲ್ಲಿ ಇದು ಮೊದಲು!

Last Updated : Sep 8, 2022, 4:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.