ಕಾರವಾರ : ಪತಿಯೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಆತ್ಮಹತ್ಯೆಯ ಕಥೆ ಕಟ್ಟಿರುವ ಘಟನೆ ಕುಮಟಾ ತಾಲೂಕಿನ ಉಪ್ಪಿನಪಟ್ಟಣ ಗ್ರಾಮದಲ್ಲಿ ನಡೆದಿದೆ.
ಮಮತಾ ಶಾನಭಾಗ್ (36) ಕೊಲೆಯಾದ ಮಹಿಳೆ. ಈಕೆ ಮಾನಸಿಕವಾಗಿ ಅಸ್ವಸ್ಥೆಯಾಗಿದ್ದಳು. ಮಂಗಳವಾರ ರಾತ್ರಿ ಪತಿ ಮಂಜುನಾಥ ಶಾನಭಾಗ್ ಜೊತೆ ಜಗಳವಾಡಿದ್ದು, ಜಗಳ ವಿಕೋಪಕ್ಕೆ ತಿರುಗಿ ರಾತ್ರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಓದಿ: ಬದಲಾದ ಸಮಯದ ನೈಟ್ ಕರ್ಫ್ಯೂ ರಾತ್ರಿ 9ಕ್ಕೆ ಜಾರಿ
ಅಲ್ಲದೆ ಕೊಲೆ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಥೆ ಕಟ್ಟಿದ್ದ. ಸಾವಿನ ಬಗ್ಗೆ ವಿಷಯ ತಿಳಿದು ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬಳಿಕ ಪತಿಯ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.