ETV Bharat / crime

ಕೊರೊನಾ ಬಂತೆಂದು ಧರ್ಮಪತ್ನಿಯನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

author img

By

Published : Apr 26, 2021, 12:42 PM IST

ಪತ್ನಿಯ ಕೋವಿಡ್​ ವರದಿ ಪಾಸಿಟಿವ್​ ಬಂದಿದೆಯೆಂದು ಜಗಳವಾಡುತ್ತಿದ್ದ ಪತಿ, ಇದೀಗ ಆಕೆಯ ಜೀವವನ್ನೇ ತೆಗೆದು ತಾನೂ ಪ್ರಾಣಬಿಟ್ಟಿದ್ದಾನೆ.

Husband murder after his wife gets corona infected in patna
ಕೊರೊನಾ ಬಂತೆಂದು ಧರ್ಮಪತ್ನಿಯನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡ ಭೂಪ

ಪಾಟ್ನಾ (ಬಿಹಾರ): ಹೆಂಡತಿಗೆ ಕೊರೊನಾ ಸೋಂಕು ತಗುಲಿದೆಯೆಂದು ಆಕೆಯನ್ನು ಕೊಲೆ ಮಾಡಿದ ಪತಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಐದಾರು ದಿನಗಳ ಹಿಂದೆ ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುವ ಅತುಲ್ ಲಾಲ್ ಎಂಬಾತನ ಪತ್ನಿಯ ಕೋವಿಡ್​ ವರದಿ ಪಾಸಿಟಿವ್​ ಬಂದಿತ್ತು. ಆಕೆ ಸೋಂಕಿಗೆ ಒಳಗಾದಾಗಿನಿಂದಲೂ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ರೌಡಿಶೀಟರ್​​ನ ಬರ್ಬರ ಹತ್ಯೆ: ವಿಡಿಯೋ ವೈರಲ್

ಇಂದು ಬೆಳಗ್ಗೆ ಬ್ಲೇಡ್‌ನಿಂದ ಹೆಂಡತಿಯ ಕುತ್ತಿಗೆ ಕೊಯ್ದು ಸಾಯಿಸಿದ್ದ ಅತುಲ್, ಅಪಾರ್ಟ್ಮೆಂಟ್​​ನ ನಾಲ್ಕನೇ ಮಹಡಿಯಿಂದ ಹಾರಿ ತನ್ನ ಜೀವವನ್ನೂ ಕಳೆದುಕೊಂಡಿದ್ದಾನೆ. ಇವರ ಮಕ್ಕಳ ಕಣ್ಮುಂದೆಯೇ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.