ಹಿಂಗೋಲಿ (ಮಹಾರಾಷ್ಟ್ರ): ನಿರ್ಮಾಣ ಹಂತದಲ್ಲಿದ್ದ ಸೇತುವೆಯಿಂದ ಕಾರು ಹಳ್ಳಕ್ಕೆ ಬಿದ್ದು ನಾಲ್ವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಸೇತುವೆ ಗುತ್ತಿಗೆದಾರನೇ ದುರಂತಕ್ಕೆ ಹೊಣೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಿಂಗೋಲಿ ಜಿಲ್ಲೆಯ ಸೆಂಗಾಂವ್ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸೇತುವೆಯಿದ್ದು, ಅನೇಕ ದಿನಗಳಾಗಿದ್ದರೂ ನಿರ್ಮಾಣ ಕಾಮಗಾರಿ ಪೂರ್ಣವಾಗಿರಲಿಲ್ಲ. ಅಲ್ಲದೇ ಎಚ್ಚರಿಕೆ ಫಲಕಗಳನ್ನೂ ಹಾಕಲಾಗಿಲ್ಲ. ಹೀಗಾಗಿ ಅನೇಕ ಅಪಘಾತಗಳು ಇಲ್ಲಿ ಸಂಭವಿಸಿರುತ್ತದೆ ಎಂದು ಸುತ್ತಲಿನ ಗ್ರಾಮದ ಜನರು ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದ ಖ್ಯಾತ ನಟಿ ಮೇಲೆ ಅತ್ಯಾಚಾರ, ಕೊಲೆಯತ್ನ: ನ್ಯಾಯಕ್ಕಾಗಿ ಪ್ರಧಾನಿ ಶೇಖ್ ಹಸೀನಾಗೆ ಮೊರೆ
ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾರಿನಲ್ಲಿದ್ದವರ ಬಳಿ ಯಾವುದೇ ಗುರುತಿನ ಚೀಟಿ ಸಿಗದ ಕಾರಣ, ಅವರನ್ನು ಇನ್ನೂ ಗುರುತಿಸಲಾಗಿಲ್ಲ.