ಮುಂಬೈ (ಮಹಾರಾಷ್ಟ್ರ): ಸುದೀರ್ಘ ವಿಚಾರಣೆಯ ನಂತರ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶನಿವಾರ ಕ್ರೂಸ್ ಹಡಗಿನಲ್ಲಿ ಪಾರ್ಟಿಯೊಂದರಲ್ಲಿ ನಡೆಸಿದ ದಾಳಿಯಲ್ಲಿ ಆರ್ಯನ್ ಮತ್ತು ಇತರ ಏಳು ಜನರನ್ನು ವಶಕ್ಕೆ ಪಡೆಯಲಾಗಿತ್ತು. ಇವರನ್ನು ಶೀಘ್ರವೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.
ಮುಂಬೈ-ಗೋವಾ ಕ್ರೂಸ್‌ನಲ್ಲಿ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಆರೋಪಿತ ಬಂಧಿತರಾದ ಇತರರಲ್ಲಿ ಆರ್ಯನ್ ಕೂಡ ಸೇರಿದ್ದಾನೆ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ-ಗೋವಾ ಸಮುದ್ರಯಾನಕ್ಕೆ ತೆರಳುವ ಕ್ರೂಸ್ ಹಡಗಿನಲ್ಲಿ ಆಯೋಜಿಸಲಾಗಿದ್ದ ರೇವ್ ಪಾರ್ಟಿಯ ಸುಳಿವು ಸಿಕ್ಕ ನಂತರ ಈ ಕಾರ್ಯಾಚರಣೆ ನಡೆಸಲಾಗಿ ಇವರು ಸಿಕ್ಕಿಬಿದ್ದಿದ್ದಾರೆ. ಈ ಹಡಗು ಮುಂಬೈನ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ನಿಂದ ಪ್ರಯಾಣ ಬೆಳೆಸಿತ್ತು.
ಕಾರ್ಯಾಚರಣೆ ಹೇಗೆ?
ಎನ್‌ಸಿಬಿ ತಮ್ಮನ್ನು ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್ ಕಾಯ್ದಿರಿಸಿಕೊಂಡರು ಮತ್ತು ಶೀಘ್ರದಲ್ಲೇ ಅವರು ತಮ್ಮ ಸಹ-ಪ್ರಯಾಣಿಕರಲ್ಲಿ ಕೆಲವರು ಡ್ರಗ್ಸ್ ಸೇವಿಸುತ್ತಿರುವುದನ್ನು ತಿಳಿದುಕೊಂಡರು. ನಂತರ ಎನ್‌ಸಿಬಿ ಪೂರ್ಣ ಪ್ರಮಾಣದ ದಾಳಿಯನ್ನು ಆರಂಭಿಸಿ ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಜನರನ್ನು ವಶಕ್ಕೆ ಪಡೆಯಿತು. ಹಾಗೆ ವಿವಿಧ ರೀತಿಯ ಮಾದಕ ವಸ್ತುಗಳನ್ನು ಆ ವೇಳೆ ವಶಪಡಿಸಿಕೊಂಡಿತ್ತು.
ಯಾರ್ಯಾರು ಭಾಗಿಯಾಗಿದ್ದರು:
8 ಮಂದಿಯ ಹೆಸರುಗಳನ್ನು ಎಸ್ಸಿಬಿ ಬಿಡುಗಡೆ ಮಾಡಿದೆ. ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ ಬಂಧಿತರು ಎಂದು ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ಮಾಹಿತಿ ನೀಡಿದ್ದಾರೆ.