ಮುಂಬೈ (ಮಹಾರಾಷ್ಟ್ರ): ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ತಾಂಜಾನಿಯಾ ಪ್ರಜೆಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದೆ
ವಿಚಾರಣೆ ವೇಳೆ ಆರೋಪಿಗಳು ಕೊಕೇನ್ ಪೌಡರ್ ತುಂಬಿದ 2.2 ಕೆಜಿ ತೂಕದ 151 ಕ್ಯಾಪ್ಸುಲ್ಗಳನ್ನು ಹೊಟ್ಟೆಯಲ್ಲಿ ಅಡಗಿಸಿಟ್ಟುಕೊಂಡಿರುವುದನ್ನು ಬಾಯ್ಬಿಟ್ಟಿದ್ದಾರೆ. ತಾಂಜಾನಿಯಾದಿಂದ ಮುಂಬೈಗೆ ವಿಮಾನ ಹತ್ತುವ ಮುನ್ನ ಇವುಗಳನ್ನು ನುಂಗಿದ್ದರು. ಇದರ ಬೆಲೆ ಸುಮಾರು 13.35 ಕೋಟಿ ರೂ. ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 1 ರೆಮ್ಡಿಸಿವಿರ್ ಇಂಜೆಕ್ಷನ್‌ಗೆ 25 ಸಾವಿರ ರೂ: ನಕಲಿ ಚುಚ್ಚುಮದ್ದು ಕಾರ್ಖಾನೆ ಮೇಲೆ ದಾಳಿ
ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆಂದು ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಇಬ್ಬನ ಹೊಟ್ಟೆಯಿಂದ 54 ಹಾಗೂ ಮತ್ತೊಬ್ಬನ ಹೊಟ್ಟೆಯಿಂದ 97 ಕೊಕೇನ್ ತುಂಬಿದ ಕ್ಯಾಪ್ಸುಲ್ಗಳನ್ನು ಹೊರ ತೆಗೆಯಲಾಗಿದೆ.