ಮುಂಬೈ (ಮಹಾರಾಷ್ಟ್ರ): ಕೋವಿಶೀಲ್ಡ್ ಲಸಿಕೆಯ ಖಾಲಿ ಬಾಟಲಿಗಳಲ್ಲಿ ನಕಲಿ ಲಸಿಕೆ ತುಂಬಿ ವ್ಯಾಕ್ಸಿನೇಷನ್ ಶಿಬಿರಗಳನ್ನು ನಡೆಸುತ್ತಿದ್ದ ಮುಂಬೈನ ವೈದ್ಯ ದಂಪತಿ ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಕಂಡಿವಳ್ಳಿಯಲ್ಲಿ 'ಶಿವಂ' ಹೆಸರಿನ ಆಸ್ಪತ್ರೆ ನಡೆಸುತ್ತಿದ್ದ ಡಾ.ಶಿವರಾಜ್ ಪಟಾರಿಯಾ (62) ಹಾಗೂ ಅವರ ಪತ್ನಿ ಡಾ. ನೀತಾ ಮಾರ್ಚ್ 14 ರಿಂದ ತಮ್ಮ ಆಸ್ಪತ್ರೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವ್ಯಾಕ್ಸಿನೇಷನ್ ಶಿಬಿರಗಳನ್ನು ಆಯೋಜಿಸಿದ್ದಾರೆ. ಬಳಕೆಯಾಗಿ ಬಿದ್ದಿರುವ ಕೋವಿಶೀಲ್ಡ್ ವ್ಯಾಕ್ಸಿನ್ನ ಖಾಲಿ ಬಾಟಲಿಗಳನ್ನು ಸಂಗ್ರಹಿಸಿ, ಅದರಲ್ಲಿ ನಕಲಿ ಲಸಿಕೆ ತುಂಬಿ ಜನರಿಗೆ ನೀಡುತ್ತಿದ್ದರು.
ಇದನ್ನೂ ಓದಿ: 2 ಸಾವಿರ ಮಂದಿಗೆ ನಕಲಿ ವ್ಯಾಕ್ಸಿನ್: ಹೈಕೋರ್ಟ್ಗೆ ಮಾಹಿತಿ ನೀಡಿದ ‘ಮಹಾ’ ಸರ್ಕಾರ..!
ಈವರೆಗೆ ಸುಮಾರು 1,50,000 ಜನರಿಗೆ ನಕಲಿ ವ್ಯಾಕ್ಸಿನ್ ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ ಮಹಾರಾಷ್ಟ್ರ ಸರ್ಕಾರವು 2,053 ಮಂದಿ ಈ ನಕಲಿ ಸಲಿಕೆ ಪಡೆದಿದ್ದಾರೆ ಎಂದು ಬಾಂಬೆ ಹೈಕೋರ್ಟ್ಗೆ ಹೇಳಿತ್ತು. ಈ ಸಂಬಂಧ ತನಿಖೆ ಚುರುಕುಗೊಳಿಸಿದ್ದ ಮುಂಬೈ ಪೊಲೀಸರು ಇದೀಗ ವೈದ್ಯ ದಂಪತಿ ಹಾಗೂ ಬೇರೆ ಬೇರೆ ಸ್ಥಳಗಳಲ್ಲಿ ಲಸಿಕಾ ಶಿಬಿರ ನಡೆಸಿದ್ದ ಮಹೇಂದ್ರ ಸಿಂಗ್ ಮತ್ತು ಮನೀಶ್ ತ್ರಿಪಾಠಿ ಸೇರಿ ಒಟ್ಟು 10 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.