ಸಹರ್ಸಾ (ಬಿಹಾರ): ಅನಿರೀಕ್ಷಿತವಾಗಿ ಪೊಲೀಸ್ ಠಾಣೆಗೆ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಭೇಟಿ ನೀಡಿದ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಮದ್ಯದ ಅಮಲಿನಲ್ಲಿರುವುದು ಕಂಡುಬಂದಿದೆ.
ಬಿಹಾರದ ಸಹರ್ಸಾದ ಸೌರಬಜಾರ್ ಪೊಲೀಸ್ ಠಾಣೆಗೆ ಡಿಐಜಿ ಪ್ರಣವ್ ಕುಮಾರ್ ಪ್ರವೀಣ್ ಅವರು ತಪಾಸಣೆಗೆ ಬಂದಿದ್ದು, ಈ ವೇಳೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಓಂಪ್ರಕಾಶ್ ರಾಮ್ ಕುಡಿದು ಬಿದ್ದಿದ್ದರು. ಹೀಗಾಗಿ ಡಿಐಜಿ ಆದೇಶದ ಮೇರೆಗೆ ಓಂಪ್ರಕಾಶ್ ರಾಮ್ರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಶಿಬಿರದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಸಿಆರ್ಪಿಎಫ್ ಯೋಧ
2016ರಿಂದ ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆ ನಿಷೇಧ ಕಾನೂನು ಜಾರಿಯಲ್ಲಿದೆ. ಯಾವುದೇ ಪೊಲೀಸರು ಮದ್ಯದ ಅಮಲಿನಲ್ಲಿರುವುದು ತಿಳಿದು ಬಂದರೆ ಅವರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಇತ್ತೀಚೆಗಷ್ಟೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೂಚಿಸಿದ್ದರು.