ಧಾರವಾಡ: ಮಾರಾಟವಾಗಿದ್ದ ಐದು ತಿಂಗಳ ಮಗುವನ್ನು ರಕ್ಷಣೆ ಮಾಡಿದ ಧಾರವಾಡ ವಿದ್ಯಾಗಿರಿ ಪೊಲೀಸರು, ಇದಕ್ಕೆ ಕಾರಣರಾದ ಆರೋಪಿಗಳನ್ನು ಬಂಧಿಸಿದ್ದಾರೆ.
ಓದಿ: ಕ್ರೈಸ್ತ ಧರ್ಮಗುರುಗಳೊಂದಿಗೆ ಡಿಸಿಎಂ ಮಾತುಕತೆ; ವಿವಿಧ ವಿಷಯಗಳ ಚರ್ಚೆ
ಭಾರತಿ ಮಂಜುನಾಥ ವಾಲ್ಮೀಕಿ (48), ರಮೇಶ ಮಂಜುನಾಥ ವಾಲ್ಮೀಕಿ (48), ರವಿ ಭೀಮಸೇನ ಹೆಗಡೆ (38), ವಿನಾಯಕ ಅರ್ಜುನ್ ಮಾದರ (27) ಹಾಗೂ ಉಡುಪಿಯ ವಿಜಯ್ ಬಸಪ್ಪ ನೆಗಳೂರ (41) ಚಿತ್ರಾ ವಿಜಯ್ ನೆಗಳೂರ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿತರಿಂದ ದೂರುದಾರರು ಮನೆಯ ಅಡಚಣೆ ಸಲುವಾಗಿ ಸಾಲ ಪಡೆದುಕೊಂಡಿದ್ದರು. ಸಾಲಕ್ಕೆ ಮೀಟರ್ ಬಡ್ಡಿ ಹಾಕಿ ಮೀತಿ ಮೀರಿದ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಾಲ ತೀರಿಸಲು ಸಾಧ್ಯವಾಗದ ಸಂದರ್ಭದಲ್ಲಿ ದೂರುದಾರ ದಂಪತಿಗಳನ್ನು ಕೂಡಿಟ್ಟು ಮಗು ಮಾರಾಟ ಮಾಡು ಎಂದು ಬೆದರಿಕೆ ಹಾಕಿ ಒತ್ತಾಯಿಸಿ ಅವರಿಂದ ಗಂಡು ಮಗುವನ್ನು ಮಾರಾಟ ಮಾಡಿಸಿದ್ದಾರೆ.
ಅಪರಿಚಿತ ದಂಪತಿಗಳಿಗೆ ಎರಡು ಲಕ್ಷ ಐವತ್ತು ಸಾವಿರ ರೂ.ಗಳಿಗೆ ಮಗುವನ್ನು ಮಾರಾಟ ಮಾಡಿದ್ದಾರೆ. ಮಗು ಮರಳಿ ಕೊಡಿಸುವಂತೆ ದೂರುದಾರರು ಪೊಲೀಸ್ ಠಾಣೆ ಮೆಟ್ಟಿಲೇರಿದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಒಪ್ಪಿಸಲಾಗಿದೆ. ವಿದ್ಯಾಗಿರಿ ಪೊಲೀಸರ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.