ETV Bharat / crime

ಆರೇ ಗಂಟೆಯಲ್ಲಿ 18 ಲಕ್ಷ ಕಳೆದುಕೊಂಡ ಸಾಫ್ಟ್​ವೇರ್​ ಇಂಜಿನಿಯರ್​..ಯುವತಿಗೆ ವಂಚನೆ ಮಾಡಿದ ಸೈಬರ್​ ಅಪರಾಧಿಗಳು! - 18 ಲಕ್ಷ ಕಳೆದುಕೊಂಡ ಸಾಫ್ಟ್​ವೇರ್​ ಇಂಜಿನಿಯರ್

ಪಾರ್ಸೆಲ್​ನಲ್ಲಿ ಡ್ರಗ್ಸ್​ ಇದೆ ಎಂದು ಬೆದರಿಕೆ - ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚನೆ - ಕೇವಲ ಆರು ಗಂಟೆಯಲ್ಲಿ 18 ಲಕ್ಷ ಕಳೆದುಕೊಂಡ ಯುವತಿ

ಹೈದ್ರಾಬಾದ್​ ಸಾಫ್ಟ್​ವೇರ್​ ಇಂಜಿನಿಯರ್​ ಯುವತಿಯಿಂದ 18 ಲಕ್ಷ ಸುಲಿಗೆ ಮಾಡಿದ ಸೈಬರ್​ ಅಪರಾಧಿಗಳು
cybercriminals-extort-18-lakhs-from-hyderabad-software-engineer
author img

By

Published : Jan 4, 2023, 12:40 PM IST

Updated : Jan 4, 2023, 2:37 PM IST

ಹೈದರಾಬಾದ್​: ಆನ್​ಲೈನ್ ವಂಚನೆಗಳ ಬಗ್ಗೆ ಜನರಿಗೆ ಸರ್ಕಾರ, ಬ್ಯಾಂಕ್​ಗಳು ಸಾಕಷ್ಟು ಎಚ್ಚರಿಕೆಯನ್ನೂ ನೀಡಿದರೂ ಸೈಬರ್​ ಅಪರಾಧ ಪ್ರಕರಣಗಳಲ್ಲಿ ಮಾತ್ರ ಯಾವುದೇ ಇಳಿಕೆ ಕಂಡು ಬಂದಿಲ್ಲ. ಇಂತಹ ಸೈಬರ್​ ಅಪರಾಧಿಗಳು ಇದೀಗ ಡ್ರಗ್ಸ್​ ಜಾಲದ ಹೆಸರಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​​ ಯುವತಿಯೊಬ್ಬಳಿಗೆ ವಂಚಿಸಿರುವ ಘಟನೆ ಸೈಬರ್​ ಸಿಟಿ ಹೈದರಾಬಾದ್​ನಲ್ಲಿ ನಡೆದಿದೆ. ಯುವತಿಗೆ ಬಂದ ಪಾರ್ಸೆಲ್​ನಲ್ಲಿ ಡ್ರಗ್ಸ್​​ ಇದೆ ಎಂದು ಆರೋಪಿಸಿ, ಆಕೆಗೆ ಬೆದರಿಸಿ ಅವರಿಂದ ಸೈಬರ್​ ಅಪರಾಧಿಗಳು 18 ಲಕ್ಷ ರೂ. ಹಣವನ್ನು ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಡ್ರಗ್ಸ್​ ಪತ್ತೆಯಾದ ಹಿನ್ನೆಲೆ ಯಾವುದೇ ಪ್ರಕರಣ ದಾಖಲಾಗದಂತೆ ರಹಸ್ಯ ಒಪ್ಪಂದ ಮಾಡುವುದಾಗಿ ಅವರು ಯುವತಿಗೆ ತಿಳಿಸಿ, ಈ ಮೊತ್ತದ ಹಣವನ್ನು ಲಪಟಾಯಿಸಿದ್ದಾರೆ.

ಯುವತಿಯ ಚಲನವಲನ ಪತ್ತೆ: ಹೈದರಾಬಾದ್​ನ ಎಲ್​ಬಿ ನಗರದ ಐಟಿ ಕಂಪನಿಯಲ್ಲಿ ಯುವತಿಯೊಬ್ಬರು ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ತಿಂಗಳು ಕಸ್ಟಮ್ಸ್​​ ಅಧಿಕಾರಿಗಳ ಸೋಗಿನಲ್ಲಿ ಸೈಬರ್​ ಅಪರಾಧಿಗಳು ಯುವತಿಗೆ ಕರೆ ಮಾಡಿದ್ದಾರೆ. ಅಲ್ಲದೇ, ಈ ಸಂಬಂದ ಪ್ರಕರಣ ದಾಖಲಾಗಿದೆ ಎಂದಿದ್ದಾರೆ. ಈ ವೇಳೆ ಯುವತಿ ತನಗೆ ಬಂದ ಪಾರ್ಸೆಲ್​ನಲ್ಲಿ ಯಾವುದೇ ಡ್ರಗ್ಸ್​ ಇಲ್ಲ ಎಂದು ಕಾಲ್​ ಕಟ್​ ಮಾಡಿದ್ದಾರೆ. ಆಗಲೂ ಬಿಡದ ಸೈಬರ್​ ಅಪರಾಧಿ ಮತ್ತೆ ಯುವತಿಗೆ ಕರೆ ಮಾಡಿ, ಎಫ್​ಐಆರ್​ ದಾಖಲಾಗಬಾರದು ಎಂದರೆ ಸಿಬಿಐ ಅಧಿಕಾರಿಗಳೊಂದಿಗೆ ತಾವು ಮಾತನಾಡಬೇಕು. ಈ ಹಿನ್ನೆಲೆ ರಹಸ್ಯ ಒಪ್ಪಂದ ಮಾಡಿಕೊಳ್ಳೊಣ ಎಂದಿದ್ದರು ಎಂದು ರಾಚಕೊಂಡ ಸೈಬರ್​ ಅಪರಾಧ ದಳದ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಬಿಐ ಅಧಿಕಾರಿ ಸೋಗಿನಲ್ಲಿ ಲೂಟಿ: ಇದಾದ ಕೆಲವೇ ನಿಮಿಷದಲ್ಲಿ ಮತ್ತೊಬ್ಬ ಯುವತಿ ಬೇರೊಂದು ನಂಬರ್​ನಿಂದ ಕರೆ ಮಾಡಿದ್ದಾನೆ. ಈತ ತಾನು ಸಿಬಿಐನಲ್ಲಿ ಕಾರ್ಯ ನಿರ್ವಹಿಸುವುದಾಗಿ ಯುವತಿಯನ್ನು ನಂಬಿಸಿದ್ದಾನೆ. ಅಲ್ಲದೇ, ಡ್ರಗ್ಸ್​​ ಪತ್ತೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಬಾರದು ಎಂದರೆ ನೀವು ನಾವು ಹೇಳಿದಂತೆ ಕೇಳಬೇಕಾಗುತ್ತದೆ. ನಮ್ಮ ಜೊತೆ ಒಪ್ಪಂದ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದನಂತೆ. ಇದಕ್ಕಾಗಿ ಒಂದು ಅಷ್ಟೂ ಹಣವನ್ನು ನೀಡುವಂತೆ ಯುವತಿಗೆ ಕೇಳಿದ್ದಾನೆ. ಅಲ್ಲದೇ, ತಾನು ಸಿಬಿಐ ಅಧಿಕಾರಿ ಎಂದು ನಂಬಿಸಲು, ಸಿಬಿಐ ಅಧಿಕಾರಿ ಅಂತಾ ಇರುವ ಐಡಿ ಕಾರ್ಡ್​ನ್ನು ಕೂಡ ಯುವತಿಗೆ ವಾಟ್ಸ್​​ಆ್ಯಪ್​ ಮೂಲಕ ಕಳುಹಿಸಿ ನಂಬಿಕೆ ಬರುವಂತೆ ಮಾಡಿದ್ದಾನೆ.

ಇವರ ಮಾತಿನಿಂದ ಹೆದರಿದ ಯುವತಿ ಎರಡು ಕಂತಿನಲ್ಲಿ 5 ಲಕ್ಷ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಒಮ್ಮಿಂದೊಮ್ಮೆ ಯುವತಿ ಖಾತೆಯಿಂದ ಹಣ ಡ್ರಾ ಆಗಿದ್ದರಿಂದ ಅನುಮಾನಗೊಂಡ ಬ್ಯಾಂಕ್​ ಸಿಬ್ಬಂದಿ ಸಾಪ್ಟ್​​ವೇರ್​ ಇಂಜಿನಿಯರ್​ ಬ್ಯಾಂಕ್​ ಖಾತೆಯನ್ನು ಅಮಾನತು ಕೂಡ ಮಾಡಿದ್ದಾರೆ. ಇದರಿಂದ ಆಕೆಗೆ ಹಣ ಕಳುಹಿಸಲು ಸಾಧ್ಯವಾಗಿಲ್ಲ. ಆದರೆ ಸೈಬರ್​ ಅಪರಾಧಿಗಳು ಬ್ಯಾಂಕ್​ ಖಾತೆಗೆ ಕನ್ನ ಹಾಕಿ 13 ಲಕ್ಷ ರೂಗಳನ್ನು ಅಲ್ಲಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸೈಬರ್​ ಅಪರಾಧ ದಳದ ಪೊಲೀಸರು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಕೇವಲ ಆರು ಗಂಟೆಗಳ ಅವಧಿಯಲ್ಲಿ ಯುವತಿ 18 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಮತ್ತಷ್ಟು ಹಣ ಕಳುಹಿಸುವಂತೆ ಒತ್ತಾಯಿಸಿದ ಬೆನ್ನಲ್ಲೇ ಯುವತಿ ರಾಚಕೊಂಡ ಸೈಬರ್​ ಅಪರಾಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದಾಗ ಸೈಬರ್​ ಕಳ್ಳರು ಕರಾಮತ್ತು ಹೊರ ಬಿದ್ದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಂಗಳಮುಖಿಯರಿಂದ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಸುಲಿಗೆ

Last Updated : Jan 4, 2023, 2:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.