ಶಿವಮೊಗ್ಗ: ಹಸು ಕಳ್ಳತನಕ್ಕೆ ಬಂದಿದ್ದ ಕಳ್ಳರು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಓದಿ: ಚಿಕ್ಕಮಗಳೂರಿನಲ್ಲಿ ಹೆಚ್ಚುತ್ತಿರುವ ದನ ಕಳ್ಳತನ ಪ್ರಕರಣಗಳು: ಸಿಸಿಟಿವಿಯಲ್ಲಿ ಕೃತ್ಯ ಸೆರೆ
ಮೊನ್ನೆ ರಾತ್ರಿ ಕಾರಿನಲ್ಲಿ ಬಂದಿದ್ದ ದನಗಳ್ಳರು ಪಟ್ಟಣದ ಆಗುಂಬೆ ಸರ್ಕಲ್ ನಿಂದ ಕೊಪ್ಪ ಸರ್ಕಲ್ ವರೆಗೂ ಏಕಮುಖ ರಸ್ತೆಯಲ್ಲಿ ಕಾರನ್ನು ಹಿಮ್ಮುಖವಾಗಿ ಚಲಿಸಿಕೊಂಡು ಪರಾರಿಯಾಗಿದ್ದಾರೆ.
ತೀರ್ಥಹಳ್ಳಿಯ ಮುಖ್ಯ ರಸ್ತೆಯಲ್ಲಿ ದನಗಳು ಸಾಮಾನ್ಯವಾಗಿ ರಸ್ತೆಯಲ್ಲಿ ಇರುತ್ತವೆ. ಇದರಿಂದ ದನ ಕದಿಯಲು ಕಳ್ಳರು ಕಾರು ಸಮೇತ ಬಂದಿದ್ದಾರೆ. ಈ ವೇಳೆಗೆ ಆಗುಂಬೆ ವೃತ್ತದ ಬಳಿ ಯುವ ಕಾಂಗ್ರೆಸ್ನ ಸಂದೀಪ್ ಹಾಗೂ ಜಾವೀದ್ ಕಾರಿನಲ್ಲಿ ಬರುವಾಗ ಕಳ್ಳರನ್ನು ಹಿಡಿಯಲು ಮುಂದಾಗಿದ್ದರು. ಆಗ ಹಿಮ್ಮುಖವಾಗಿ ಕಾರನ್ನು ಚಲಿಸಿ ಖದೀಮರು ಪರಾರಿಯಾಗಿದ್ದಾರೆ.
ತೀರ್ಥಹಳ್ಳಿ ಭಾಗದಲ್ಲಿ ದನಗಳ್ಳತನ ಹೆಚ್ಚಾಗಿ ನಡೆಯುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. ಸದ್ಯ ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.