ETV Bharat / crime

ಒಂದೇ ದಿನ ಅಪ್ಪ-ಅಮ್ಮನ ಸಾವು; ಪೋಷಕರ ಕಳೆದುಕೊಂಡು 6 ಮಕ್ಕಳಲ್ಲಿ ಮಡುಗಟ್ಟಿದ ಶೋಕ - couple died on the same day

ಪತ್ನಿಯ ಸಾವು ಅರಗಿಸಿಕೊಳ್ಳಲಾಗದ ಪತಿಯೂ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ಮದಲಗಟ್ಟಿ ಗ್ರಾಮದಲ್ಲಿ ನಡೆಯಿತು.

a couple united in death in the madalagatti
ಕುಷ್ಟಗಿ ಮದಲಗಟ್ಟಿ ಗ್ರಾಮದಲ್ಲಿ ಸಾವಿನಲ್ಲೂ ಒಂದಾದ ದಂಪತಿ
author img

By

Published : Nov 3, 2022, 10:17 AM IST

ಕುಷ್ಟಗಿ: ಪತ್ನಿಯ ಸಾವು ಅರಗಿಸಿಕೊಳ್ಳಲಾಗದ ಪತಿಯೂ ಮೃತಪಟ್ಟಿರುವ ಘಟನೆ ಕುಷ್ಟಗಿ ತಾಲೂಕು ಮದಲಗಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊನ್ನಮ್ಮ ಶಿವಪ್ಪ ತಳವಾರ (56) ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ(ನಿನ್ನೆ) ನಿಧನರಾಗಿದ್ದರು. ಬಾಳಸಂಗಾತಿಯ ಅಗಲಿಕೆಯ ನೋವು ತಡೆದುಕೊಳ್ಳಲಾಗದೇ ಪತಿ ಶಿವಪ್ಪ ತಳವಾರ (60) ಕೂಡಾ ಅದೇ ದಿನ ರಾತ್ರಿಯೇ ಸುಮಾರು 10 ಗಂಟೆಗೆ ಏಕಾಏಕಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.

ಪತ್ನಿಯ ಸಾವಿನ ನೋವು ತಾಳಲಾರದೆ ಶಿವಪ್ಪ ತಳವಾರ ಮನೆಯಲ್ಲಿ ರಾತ್ರಿ ದಿಢೀರ್ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಇಬ್ಬರೂ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಮೃತರಿಗೆ ನಾಲ್ವರು ಪುತ್ರಿಯರು, ಇಬ್ಬರು ಪುತ್ರರಿದ್ದಾರೆ. ಅಂತಿಮ ಸಂಸ್ಕಾರವನ್ನು ಇಂದು ಮಧ್ಯಾಹ್ನ ಮೃತ ದಂಪತಿಯ ಜಮೀನಿನಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಒಂದೇ ದಿನ ಪತಿ, ಪತ್ನಿಯ ಸಾವು ಗ್ರಾಮಸ್ಥರಿಗೆ ಅಚ್ಚರಿ ಉಂಟುಮಾಡಿದೆ.

ಇದನ್ನೂ ಓದಿ:ಇನ್ಸ್​ಪೆಕ್ಟರ್​ ನಂದೀಶ್ ಸಾವು ಪ್ರಕರಣ: ಇಬ್ಬರು ಸಚಿವರು ಸೇರಿ 6 ಮಂದಿ ವಿರುದ್ಧ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.