ETV Bharat / crime

ಅಂಬಾನಿ ಮನೆ ಮುಂದಿದ್ದ ಕಾರು ಮನ್ಸುಖ್​ದಲ್ಲ, ಸ್ಯಾಮ್ ನ್ಯೂಟನ್​​ಗೆ ಸೇರಿದ್ದು..! - ಮನ್ಸುಖ್​ ಹಿರೇನ್

ಮುಖೇಶ್​​ ಅಂಬಾನಿ ಮನೆ ಬಳಿ ಇದ್ದ ಸ್ಫೋಟಕ ತುಂಬಿದ್ದ ಕಾರು ಥಾಣೆ ಮೂಲದ ಸ್ಯಾಮ್ ಪೀಟರ್ ನ್ಯೂಟನ್ ಹೆಸರಿನಲ್ಲಿ ನೋಂದಣಿಯಾಗಿದೆ.

Scorpio
ಸ್ಫೋಟಕ ಕಾರು
author img

By

Published : Mar 12, 2021, 12:57 PM IST

ಮುಂಬೈ: ಉದ್ಯಮಿ ಮುಖೇಶ್​​ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಎಸ್​ಯುವಿ ಕಾರು ಪತ್ತೆ ಪ್ರಕರಣ ಸಂಬಂಧ ಇದೀಗ ಮತ್ತೊಂದು ಮಾಹಿತಿ ಬಹಿರಂಗವಾಗಿದೆ.

ಸ್ಕಾರ್ಪಿಯೋ ಕಾರು ಮಾಲೀಕ ಮೃತ ಮನ್ಸುಖ್​ ಹಿರೇನ್ ಅವರದ್ದು ಅಲ್ಲ, ಥಾಣೆ ಮೂಲದ ಸ್ಯಾಮ್ ನ್ಯೂಟನ್​​ ಎಂಬವರಿಗೆ ಸೇರಿದ್ದು ಎನ್ನುವ ಸತ್ಯಾಂಶ ತಿಳಿದು ಬಂದಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಕಾರನ್ನು 2007ರಲ್ಲಿ ಸ್ಯಾಮ್ ಪೀಟರ್ ನ್ಯೂಟನ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಮನ್ಸುಖ್ ಅವರು ಕಾರ್​ ಡೆಕೋರೇಷನ್​ ಬ್ಯುಸಿನೆಸ್​ ನಡೆಸುತ್ತಿದ್ದು, ಕಾರಿನಲ್ಲಿ ಕೆಲ ಬದಲಾವಣೆ ಮಾಡಲೆಂದು ಅದರ ಮಾಲೀಕ ಸ್ಯಾಮ್ ನ್ಯೂಟನ್ ಕಾರನ್ನು ಮನ್ಸುಖ್​ಗೆ ನೀಡಿದ್ದರು. ಇದರ ವೆಚ್ಚವಾಗಿ ಸ್ಯಾಮ್ ನ್ಯೂಟನ್​​ಗೆ 2 ಲಕ್ಷ 80 ಸಾವಿರ ರೂ. ಬಿಲ್​​ ಅನ್ನು ಮನ್ಸುಖ್ ನೀಡಿದ್ದಾರೆ. ಹೀಗಾಗಿ ಆಕ್ಸಿಸ್ ಬ್ಯಾಂಕ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್‌ ಚೆಕ್‌ಗಳ ಮೂಲಕ ನ್ಯೂಟನ್​​ ಹಣ ಪಾವತಿಸಿದ್ದರು ಎಂಬುದು ತನಿಖೆಯ ವೇಳೆ ಗೊತ್ತಾಗಿದೆ.

ಪ್ರಕರಣದ ಹಿನ್ನೆಲೆ

ಕೆಲ ದಿನಗಳ ಹಿಂದೆ ಉದ್ಯಮಿ ಮುಖೇಶ್​​ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಎಸ್​ಯುವಿ ಕಾರು ಪತ್ತೆಯಾಗಿತ್ತು. ಮುಂಬೈ ಕ್ರೈಂ ಬ್ರ್ಯಾಂಚ್​ ಹಾಗೂ ಎಟಿಎಸ್​ ಜಂಟಿಯಾಗಿ ಪ್ರಕರಣ ತನಿಖೆ ನಡೆಸುತ್ತಿದ್ದು, ಮುಂಬೈ ಮೂಲದ ಮನ್ಸುಖ್​ ಹಿರೇನ್ ಅವರು ಸ್ಕಾರ್ಪಿಯೋ ಕಾರು ಮಾಲೀಕ ಎಂದು ಹೇಳಲಾಗಿತ್ತು. ಆದರೆ, ಮಾರ್ಚ್ 5ರಂದು ಥಾಣೆಯ ನದಿಯೊಂದರಲ್ಲಿ ಮನ್ಸುಖ್​ ಹಿರೇನ್ ಮೃತದೇಹ ಪತ್ತೆಯಾಗಿತ್ತು. ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಮುಂಬೈನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶಂಕಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.