ETV Bharat / crime

ಮನೆಯ ಕಾರು ಚಾಲಕನಿಂದಲೇ ವೈದ್ಯೆ ಮೇಲೆ ಲೈಂಗಿಕ‌ ದೌರ್ಜನ್ಯ.. ಬೆಂಗಳೂರಲ್ಲಿ ದುಷ್ಕೃತ್ಯ - car driver sexually assaults

ಕಾರು ಚಾಲಕನಿಂದ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ- ಪುಲಿಕೇಶಿ ನಗರ ಠಾಣೆಯಲ್ಲಿ ದೂರು- ನಾಪತ್ತೆಯಾಗಿರುವ ಆರೋಪಿ

Sexual assault picture
ಲೈಂಗಿಕ‌ ದೌರ್ಜನ್ಯ ಚಿತ್ರ
author img

By

Published : Dec 24, 2022, 3:54 PM IST

ಬೆಂಗಳೂರು: ಮನೆಯ ಕಾರಿನ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ವೈದ್ಯೆಯೊಬ್ಬರು ಪುಲಿಕೇಶಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 32 ವರ್ಷದ ಸಂತ್ರಸ್ತ ಮಹಿಳೆ ದೂರಿನನ್ವಯ ಪೊಲೀಸರು ಆರೋಪಿ ಬಂಧನಕ್ಕೆ ಕಾರ್ಯಾಚರಣೆ ಶುರು ಮಾಡಿದ್ದಾರೆ.

ನಡೆದಿದ್ದೇನು.. ಡಿಸೆಂಬರ್ 15ರಂದು ತಮ್ಮ ನಾಲ್ಕೂವರೆ ವರ್ಷದ ಮಗುವಿನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ವೈದ್ಯೆ ಪುಲಿಕೇಶಿ ನಗರ ರೈಲ್ವೆ ಬ್ರಿಡ್ಜ್ ಬಳಿ ತಲೆ ಸುತ್ತಿನಿಂದ ಅಸ್ವಸ್ಥರಾಗಿದ್ದಾರೆ‌. ಆಗ ಕಾರು ನಿಲ್ಲಿಸಿದ ಚಾಲಕ ಕುಡಿಯಲು ನೀರು ನೀಡಿದ್ದಾನೆ. ಇದೇ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿ, ಅವರ ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದಾನಂತೆ. ಮಾತ್ರವಲ್ಲ, ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಲು ಯತ್ನಿಸಿದ್ದಾನೆ ಎಂದು ವೈದ್ಯೆ ಆರೋಪಿಸಿದ್ದಾರೆ.

ಸಂತ್ರಸ್ತ ಮಹಿಳೆ ಪ್ರತಿರೋಧಿಸಿದಾಗ ಮನೆಯ ತನಕ ಕಾರಿನಲ್ಲಿ ಕರೆದೊಯ್ದು ಬಿಟ್ಟು, ಚಾಲಕ ಕಾರ್ ಕೀ ನೀಡಿ ಪರಾರಿಯಾಗಿದ್ದಾನೆ ಎಂದು ದೂರು ದಾಖಲಾಗಿದೆ. ಸದ್ಯ ನೊಂದ ಮಹಿಳೆ ನೀಡಿರುವ ದೂರಿನನ್ವಯ ಪುಲಿಕೇಶಿ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354 (ಲೈಂಗಿಕ ಕಿರುಕುಳ) ಆರೋಪದಡಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ:ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಭಾವಿ ಪತಿಯ ಕಿರಿ ಸಹೋದರ: 10 ಕೆಜಿ ಉಪ್ಪು ಸುರಿದು ಶವ ಹೂತಿದ್ದ ಖದೀಮ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.