ETV Bharat / crime

ಪಿಕ್​ನಿಕ್​ನಿಂದ ಮರಳುತ್ತಿದ್ದ ವಿದ್ಯಾರ್ಥಿಗಳ ಬಸ್​ ಅಪಘಾತ; ಇಬ್ಬರ ಸಾವು, 47 ಮಂದಿಗೆ ಗಾಯ

author img

By

Published : Dec 12, 2022, 9:57 AM IST

ಬಸ್​ ಬ್ರೇಕ್​ ಫೇಲ್​ ನಿಂದಾಗಿ ಬಸ್​ ನಿಯಂತ್ರಣಕ್ಕೆ ಸಿಗಲಿಲ್ಲ ಎಂದು ಡ್ರೈವರ್​ ತಿಳಿಸಿದ್ದಾರೆ. ಹಳೆ ಮುಂಬೈ- ಪುಣೆ ಹೆದ್ಧಾರಿ ಬಳಿ ರಾತ್ರಿ 8ಗಂಟೆಗೆ ಈ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಿಕ್​ನಿಕ್​ನಿಂದ ಮರಳುತ್ತಿದ್ದ ವಿದ್ಯಾರ್ಥಿಗಳಿದ್ದ ಬಸ್​ ಅಪಘಾತ; ಇಬ್ಬರ ಸಾವು, 47 ಮಂದಿಗೆ ಗಾಯ
bus-accident-where-students-were-returning-from-picnic-two-killed-47-injured

ಮುಂಬೈ: ಪಿಕ್​ನಿಕ್​ ಮುಗಿಸಿ ಮರಳುತ್ತಿದ್ದ ಶಾಲಾ ಬಸ್​ವೊಂದು ಅಪಘಾತಕ್ಕೀಡಾದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 47 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸಂಭವಿಸಿದೆ. ಇಲ್ಲಿನ ಲೊಮವಲಾಗೆ ಪಿಕ್​ನಿಕ್​ಗೆ ತೆರಳಿದ್ದ ವಿದ್ಯಾರ್ಥಿಗಳಿದ್ದ ಬಸ್​​ ಖೋಪೊಲಿ ಹಿಲ್​ ಸ್ಟೇಷನ್​ನಲ್ಲಿ​ ಅಪಘಾತಕ್ಕೆ ಒಳಗಾಗಿದೆ.

ಬ್ರೇಕ್​ ಫೇಲ್​ ಆಗಿದ್ದರಿಂದ ಬಸ್​ ನಿಯಂತ್ರಣಕ್ಕೆ ಸಿಗಲಿಲ್ಲ ಎಂದು ಡ್ರೈವರ್​ ತಿಳಿಸಿದ್ದಾರೆ. ಹಳೆ ಮುಂಬೈ- ಪುಣೆ ಹೆದ್ಧಾರಿ ಬಳಿ ರಾತ್ರಿ 8ಗಂಟೆಗೆ ಈ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಬುರ್ಬನ್​ ಚೆಂಬುರ್​ ಕೋಚಿಂಗ್​ ಕ್ಲಾಸಿನ 10ನೇ ತರಗತಿಯ 49 ವಿದ್ಯಾರ್ಥಿಗಳು ಖಾಸಗಿ ಬಸ್​ನಲ್ಲಿ ಪ್ರವಾಸಕ್ಕೆ ತೆರಳಿದ್ದರು. ಘಾಟ್​ನಲ್ಲಿ ಇಳಿಯುವಾಗ ಬಸ್​ ನಿಯಂತ್ರಣ ತಪ್ಪಿದೆ. ರಾಜೇಶ್​ ಮಾತ್ರೆ (16) ಮತ್ತು ಹಿತಿಕ ಖನ್ನಾ (17) ಎಂಬ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಡ್ರೈವರ್​ ಸೇರಿದಂತೆ ಗಾಯಗೊಂಡ ಬಸ್​ನ ಎಲ್ಲಾ ವಿದ್ಯಾರ್ಥಿಗಳನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಕುರಿತು ಎಫ್​ಐಆರ್​ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ರೋಪ್​ ವೇ ಮೂಲಕ ವೇದಿಕೆಗೆ ವಧುವಿನ ಆಗಮನ: ಶೋಕವಾಗದಿರಲಿ ಶೋಕಿ ಎಂದು ನೆಟ್ಟಿಗರ ನೆಗೆಟಿವ್​ ಕಮೆಂಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.