ಬಿಕಾನೆರ್: ರಾಜಸ್ಥಾನದ ಬಿಕಾನೆರ್‌ನಲ್ಲಿರುವ ಭಾರತ - ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಹೆರಾಯಿನ್ ಕಳ್ಳಸಾಗಣೆದಾರರ ಯೋಜನೆಗಳನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ವಿಫಲಗೊಳಿಸಿದ್ದು, ಕೋಟ್ಯಂತರ ರೂ. ಮೌಲ್ಯದ 54 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ.
ತಡರಾತ್ರಿ ಪಾಕಿಸ್ತಾನದ ಇಬ್ಬರು ಮಾದಕ ವಸ್ತು ಕಳ್ಳಸಾಗಣೆದಾರರು ಭಾರತದ ಗಡಿಯನ್ನು ಪ್ರವೇಶಿಸಿ ಹೆರಾಯಿನ್ ಸಾಗಿಸಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಬಿಎಸ್ಎಫ್ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: 4,500 ಲೀಟರ್ ವಿಷಕಾರಿ ಮದ್ಯ ವಶಕ್ಕೆ: ಮೂವರು ಅರೆಸ್ಟ್
ಎರಡೂ ದೇಶಗಳ ಡ್ರಗ್ಸ್ ಸ್ಮಗ್ಲರ್ಸ್ ಪರಾರಿಯಾಗಿದ್ದಾರೆ. ಆದರೆ ಇವರ ಬಳಿಯಿದ್ದ ಕೋಟ್ಯಂತರ ರೂ. ಮೌಲ್ಯದ 54 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್‌ನ ಬಿಕಾನೆರ್ ವಲಯದ ಡಿಐಜಿ ಪುಷ್ಪೇಂದ್ರ ಸಿಂಗ್ ರಾಥೋಡ್ ಹೇಳಿದ್ದಾರೆ.