ETV Bharat / crime

ರಾಮನಗರದಲ್ಲಿ ವರನಿಗೆ ಕೈಕೊಟ್ಟ ವಧು: ಸಿನಿಮಾ ಸ್ಟೈಲ್‌ನಲ್ಲಿ ಮಧ್ಯರಾತ್ರಿ ಪ್ರಿಯಕರನೊಂದಿಗೆ ಕಲ್ಯಾಣ ಮಂಟಪದಿಂದಲೇ ಪರಾರಿ - ರಾಮನಗರ

Bride escape: ರಾತ್ರಿ ಅರತಕ್ಷತೆಯಲ್ಲಿದ್ದ ವಧು ಬಳಿಕ ಕಲ್ಯಾಣ ಮಂಟದಿಂದ ತನ್ನ ಪ್ರಿಯಕರನೊಂದಿಗೆ ಸಿನಿಮಾ ಶೈಲಿಯಲ್ಲಿ ಪರಾರಿಯಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

Bride escapes with lover from the wedding hall at midnight in cinema style
ರಾಮನಗರ: ಸಿನಿಮಾ ಸ್ಟೈಲ್‌ನಲ್ಲಿ ಮಧ್ಯರಾತ್ರಿ ಕಲ್ಯಾಣ ಮಂಟಪದಿಂದಲೇ ವಧು ಪರಾರಿ
author img

By

Published : Nov 25, 2021, 5:05 PM IST

ರಾಮನಗರ: ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದ್ದು, ಎರಡು ಕುಟುಂಬಗಳು ಸದಸ್ಯರು ಕಂಗಾಲಾಗುವಂತೆ ಮಾಡಿದೆ. ಬೆಳಗ್ಗೆ ಹಸೆಮಣೆ ಏರಬೇಕಾದ ಮಧು ಮಗಳು ರಾತ್ರೋರಾತ್ರಿ ಕಲ್ಯಾಣ ಮಂಟಪದಿಂದಲೇ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿರುವ ವಿಚಿತ್ರ ಘಟನೆ ಚನ್ನಪಟ್ಟಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

Bride escape: ಪರಾರಿಯಾಗಿರುವ ಯುವತಿಗೆ ಇದೇ ತಾಲೂಕಿನ ಬೇರೊಬ್ಬ ಯುವಕನೊಂದಿಗೆ ನಗರದ ಹೊರವಲಯದ ಕಲ್ಯಾಣಮಂಟಪದಲ್ಲಿ ಬುಧವಾರ ಮದುವೆ ನಿಶ್ಚಯವಾಗಿತ್ತು. ವಧು ಹಾಗೂ ವರನ ಎರಡೂ ಕಡೆಯವರಲ್ಲಿ ಸಂಭ್ರಮ ಮನೆ ಮಾಡಿತ್ತು. ಉತ್ತಮ ಸ್ಥಿತಿವಂತರಾಗಿದ್ದ ಎರಡು ಕುಟುಂಬಗಳು ತಮ್ಮ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿಯೇ ಆಯೋಜಿಸಿದ್ದರು.

ಕಲ್ಯಾಣಮಂಟಪದಲ್ಲಿ ಅರತಕ್ಷತೆ ಕಾರ್ಯಕ್ರಮವೂ ಅದ್ಧೂರಿಯಾಗಿ ನೇರವೇರಿತ್ತು. ಎರಡು ಕುಟುಂಬದ ಬಂಧುಬಳಗ ಈ ವೇಳೆ ಹಾಜರಿದ್ದು, ಹಸೆಮಣೆಗೆ ಏರಲು ಸಿದ್ಧವಾಗಿದ್ದ ಜೋಡಿಗೆ ಶುಭ ಹಾರೈಸಿದ್ದರು.

ಮಧ್ಯರಾತ್ರಿ ಕಲ್ಯಾಣ ಮಂಟಪದಿಂದ ಎಸ್ಕೇಪ್
ರಾತ್ರಿ ಆರತಕ್ಷತೆಯಲ್ಲಿ ಸಂತೋಷದಿಂದ ಭಾಗವಹಿಸಿದ್ದ ಯುವತಿ, ಮಧ್ಯರಾತ್ರಿ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಪರಾರಿಯಾಗಿ ಎರಡು ಕುಟುಂಬಗಳಿಗೆ ಶಾಕ್ ನೀಡಿದ್ದಾಳೆ. ರಾತ್ರಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಖುಷಿಯಿಂದಲೇ ಮಧು ಮಗನೊಂದಿಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದ ಯುವತಿ ಎಲ್ಲರೂ ನಿದ್ದೆಗೆ ಜಾರಿದ ನಂತರ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಎಸ್ಕೇಪ್ ಆಗಿದ್ದಾಳೆ.

ಇಂಜಿನಿಯರ್ ಪದವೀಧರೆಯಾಗಿರುವ ಈಕೆಗೆ ಉತ್ತಮ ಸಂಬಂಧ ನೋಡಿ ಆಕೆಯ ಪೋಷಕರು ವಿವಾಹ ಏರ್ಪಡಿಸಿದ್ದರು. ಸದ್ಯ ತಮ್ಮ ಪುತ್ರಿಯ ನಿರ್ಧಾರದಿಂದ ಅಘಾತಕ್ಕೊಳಗಾದ ಕುಟುಂಬಸ್ಥರು ಗುರುವಾರ ಬೆಳಗ್ಗೆಯೇ ಕಲ್ಯಾಣಮಂಟಪ ಖಾಲಿ ಮಾಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.