ETV Bharat / crime

ಫೇಕ್ ಫೇಸ್‌ಬುಕ್ ಐಡಿ; 14 ಲಕ್ಷ ರೂ. ದೋಚಿದ 'ಸುಶ್ಮಾ' ! - ಫೆಕ್​​ ಫೇಸ್‌ಬುಕ್‌ ಗೆಳತಿ ನಂಬಿ 14 ಲಕ್ಷ ರೂ ಕಳೆದುಕೊಂಡ ಪ್ರೇಮಿ

ಮೂರು ವರ್ಷಗಳಿಂದ ಚಾಟಿಂಗ್ ಮಾಡಿ ತಾನೂ ಮೂಕಿ ಮಾತು ಬರಲ್ಲವೆಂದು ನಾಟಕವಾಡಿ ಪ್ರೀತಿ ಮಾಡುವುದಾಗಿ ನಂಬಿಸಿ ರುದ್ರಗೌಡ ಮಲ್ಲನಗೌಡ ಪಾಟೀಲ್ ಕಡೆಯಿಂದ ಹಾಗೂ ಪರಿಚಯಸ್ಥರ ಕಡೆಯಿಂದ ಸುಮಾರು 14-15 ಲಕ್ಷ ರೂ. ಹಣವನ್ನು ಜಮೆ ಮಾಡಿಸಿಕೊಂಡು ವಂಚನೆ ಮಾಡಿದ್ದಾಗಿ ತಿಳಿದುಬಂದಿದೆ.

boy-lost-14-lakhs-of-money-for-fake-facebook-lover
ಫೆಕ್​​ ಫೇಸ್‌ಬುಕ್‌
author img

By

Published : Feb 4, 2021, 7:09 PM IST

Updated : Feb 4, 2021, 10:04 PM IST

ಹುಬ್ಬಳ್ಳಿ : ಫೇಸ್‌ಬುಕ್​ನಲ್ಲಿ ಪರಿಚಯವಾದ ಯುವತಿಯನ್ನು ನಂಬಿ ಯುವಕನೊಬ್ಬ 14 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡ ಘಟನೆ ತಾಲೂಕಿನ ಗಂಗಿವಾಳದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಪ್ರತಾಪ ಡಿ.ಎಂ. ಎಂಬಾತ ಹುಡುಗಿಯ ಹೆಸರಿನಲ್ಲಿ ಫೇಸ್‌ಬುಕ್‌ ಖಾತೆಯನ್ನು ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ ಮಾಡಿದ್ದಾನೆ. ಈತ ರುದ್ರಗೌಡ ಮಲ್ಲನಗೌಡ ಪಾಟೀಲ ಎಂಬುವರಿಗೆ ಸುಶ್ಮಾ ಸುಸು ಎಂಬ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಫ್ರೆಂಡ್ಸ್ ರಿಕ್ವೆಸ್ಟ್ ಕಳಿಸಿ ಬಳಿಕ ಪ್ರೀತಿ ಮಾಡುವುದಾಗಿ ಹೇಳಿ ನಂಬಿಸಿದ್ದ.

ಮೂರು ವರ್ಷಗಳಿಂದ ಚಾಟಿಂಗ್ ಮಾಡಿ ತಾನು ಮೂಕಿ, ಮಾತು ಬರಲ್ಲವೆಂದು ನಾಟಕವಾಡಿ ಪ್ರೀತಿ ಮಾಡುವುದಾಗಿ ನಂಬಿಸಿ ರುದ್ರಗೌಡ ಮಲ್ಲನಗೌಡ ಪಾಟೀಲ ಕಡೆಯಿಂದ ಹಾಗೂ ಪರಿಚಯಸ್ಥರ ಕಡೆಯಿಂದ ಸುಮಾರು 14-15 ಲಕ್ಷ ರೂ. ಹಣ ಜಮೆ ಮಾಡಿಸಿಕೊಂಡು ವಂಚನೆ ಮಾಡಿದ್ದಾಗಿ ತಿಳಿದುಬಂದಿದೆ.

ಧಾರವಾಡ ಎಸ್​ಪಿ ಅವರಿಂದ ಮಾಹಿತಿ

ಮದುವೆ ಮಾಡಿಕೊಳ್ಳುವ ಆಮಿಷವೊಡ್ಡಿ ಹಲವಾರು ಜನರ ಬಳಿ 14 ರಿಂದ 15 ಲಕ್ಷ ರೂ. ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದ ಪ್ರತಾಪನ ವಿರುದ್ಧ ರುದ್ರಗೌಡ ಮಲ್ಲನಗೌಡ ಪಾಟೀಲ ಅವರು ನೀಡಿದ ದೂರಿನ ಮೇರೆಗೆ ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು‌ ತನಿಖೆ ನಡೆಸಿದ ಸೈಬರ್ ಕ್ರೈಂ ಪೋಲೀಸರು ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ವಂಚಿಸುತ್ತಿದ್ದ ಆರೋಪಿ ಪ್ರತಾಪ್​ನನ್ನು ಬಂಧಿಸಿ 1.25 ಲಕ್ಷ ರೂ. ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಕೃಷ್ಣಕಾಂತ ಅವರ ಮಾರ್ಗದರ್ಶನದಲ್ಲಿ, ಧಾರವಾಡ ಸೈಬರ್ ಕ್ರೈಂ, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ವಿಜಯ ಬಿರಾದಾರ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ‌ಪಾಲ್ಗೊಂಡಿದ್ದರು.

Last Updated : Feb 4, 2021, 10:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.