ETV Bharat / crime

ಭಾರತ-ಇಂಗ್ಲೆಂಡ್​ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್​​... 35 ಬುಕ್ಕಿಗಳ ಬಂಧಿಸಿದ ಪೊಲೀಸರು! - 35 ಬುಕ್ಕಿಗಳ ಬಂಧಿಸಿದ ಪೊಲೀಸರು

ಟೀಂ ಇಂಡಿಯಾ ವಿರುದ್ಧದ ಇಂಗ್ಲೆಂಡ್​ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ 35 ಬುಕ್ಕಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

India-England ODI Match
India-England ODI Match
author img

By

Published : Mar 27, 2021, 3:31 AM IST

ಮುಂಬೈ: ಭಾರತ-ಇಂಗ್ಲೆಂಡ್ ತಂಡಗಳ ನಡುವೆ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಬೆಟ್ಟಿಂಗ್​ ದಂಧೆ ನಡೆಸುತ್ತಿದ್ದ 35 ಬುಕ್ಕಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಬೆಟ್ಟಿಂಗ್​ ನಡೆಸಲಾಗಿತ್ತು ಎನ್ನಲಾಗಿದ್ದು, ಇದೇ ಆರೋಪದ ಮೇಲೆ 35 ಬುಕ್ಕಿಗಳ ಬಂಧನ ಮಾಡಲಾಗಿದೆ. ಇವರು ದೇಶಾದ್ಯಂತ ಏಜೆಂಟ್​ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಪಿಂಪ್ರಿ ಚಿಂಚ್​ವಾಡ್​ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಟೋಕ್ಸ್​, ಬೇರ್​ಸ್ಟೋ ಸ್ಫೋಟಕ ಬ್ಯಾಟಿಂಗ್​, ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್​ಗೆ ಗೆಲುವು

ಮೈದಾನದ ಪಕ್ಕದಲ್ಲೇ ಇವರನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಪೊಲೀಸರು ತಿಳಿಸಿರುವ ಪ್ರಕಾರ, ಪ್ರತಿ ಎಸೆತದ ಫಲಿತಾಂಶದ ಬಗ್ಗೆ ಮಾಹಿತಿ ವರ್ಗಾವಣೆ ಮಾಡ್ತಿದ್ದರು ಎನ್ನಲಾಗಿದೆ. ಇದೇ ರೀತಿಯಾಗಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಕ್ರಿಕೆಟ್​ ಪಂದ್ಯವೊಂದರಲ್ಲಿ ಬೆಟ್ಟಿಂಗ್​ ದಂಧೆ ನಡೆಸಿದ್ದ ಆರೋಪದ ಮೇಲೆ ಕಳೆದ ನವೆಂಬರ್​ ತಿಂಗಳಲ್ಲಿ ಗುರುಗ್ರಾಮ್​ನಲ್ಲಿ ಇಬ್ಬರು ವ್ಯಕ್ತಿಗಳ ಬಂಧನ ಮಾಡಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.