ETV Bharat / crime

ಡಬ್ಲಿಂಗ್ ಆಸೆಗೆ ಬಿದ್ದು, ಕೋಟಿ ರೂ ದುರ್ಬಳಕೆ ಮಾಡಿದ ಬ್ಯಾಂಕ್ ಮ್ಯಾನೇಜರ್, ಜವಾನ ಅರೆಸ್ಟ್

author img

By

Published : Jan 30, 2021, 7:07 PM IST

Updated : Jan 30, 2021, 7:43 PM IST

ಹಣ ಡಬ್ಲಿಂಗ್ ಆಸೆಗೆ ಬಿದ್ದು ಬ್ಯಾಂಕ್​ ಆಫ್​ ಬರೋಡಾದಿಂದ ಒಂದು ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದ್ದ ಬ್ಯಾಂಕ್ ಮ್ಯಾನೇಜರ್ ಮತ್ತು ಜವಾನ ಹಾಗೂ ಬ್ಯಾಂಕ್ ಸಿಬ್ಬಂದಿ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಕಂಬಿ ಹಿಂದೆ ಕೂರಿಸಿದ್ದಾರೆ.

bank manager and jawana arrests in a fraud case
ಬ್ಯಾಂಕ್ ಮ್ಯಾನೇಜರ್ ಮತ್ತು ಜವಾನ ಅರೆಸ್ಟ್

ಬೆಂಗಳೂರು: ಹಣ ಡಬ್ಲಿಂಗ್ ಆಸೆಗೆ ಬಿದ್ದು ಬ್ಯಾಂಕ್ ಆಫ್ ಬರೋಡಾಕ್ಕೆ ಸೇರಿದ 1 ಕೋಟಿ ಹಣ ದುರ್ಬಳಕೆ ಮಾಡಿದ ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರನ್ನು ಯಲಹಂಕ ಪೊಲೀಸರು ಬಂಧಿಸಿ ವಿಚಾರಣೆ ನೆಡೆಸುತ್ತಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮ್ಯಾನೇಜರ್ ಅರುಣ್ ವೀರಮಲ್ಲ, ಕಮಿಷನ್ ಏಜೆಂಟ್ ಬಸವರಾಜ್, ಬ್ಯಾಂಕ್ ಜವಾನ ರಾಮಕೃಷ್ಣ ಹಾಗೂ ಇಮ್ತಿಯಾಜ್​​ನನ್ನು ಪೊಲೀಸರು ವಶಕ್ಕೆ ಪಡಿದ್ದಾರೆ.

ಬ್ಯಾಂಕ್ ಆಫ್​ ಬರೋಡಾದ ಕರೆನ್ಸಿ ಚೆಸ್ಟ್ ಸಿದ್ದಯ್ಯ ರಸ್ತೆಯಲ್ಲಿದ್ದು, ಜನವರಿ 12 ರಂದು ಅರುಣ್ ವೀರಮಲ್ಲಯ್ಯ ತಮ್ಮ ಬ್ಯಾಂಕ್ ಶಾಖೆಯ ಕಾರ್ಯ ಚಟುವಟಿಕೆಗಳಿಗಾಗಿ ಸಿದ್ದಯ್ಯ ರಸ್ತೆಯಲ್ಲಿರುವ ಕರೆನ್ಸಿ ಚೆಸ್ಟ್ ಶಾಖೆಗೆ ಹೋಗಿ, 1 ಕೋಟಿ ಹಣ ತೆಗೆದುಕೊಳ್ಳಲು ಮನವಿ ಸಲ್ಲಿಸಿದ್ದರು.

ಕರೆನ್ಸಿ ಚೆಸ್ಟ್​ನಿಂದ 1 ಕೋಟಿ ಹಣ ತೆಗೆದುಕೊಂಡು ಹೋದ ಅರುಣ್ ವೀರಮಲ್ಲ ನೇರವಾಗಿ ಆರ್‌.ಆರ್. ನಗರದಲ್ಲಿರುವ ತಮ್ಮ ಬ್ಯಾಂಕ್‌ಗೆ ಅದನ್ನು ತೆಗೆದುಕೊಂಡು ಬಂದಿದ್ದ. ಬ್ಯಾಂಕ್‌ಗೆ ಹಣ ಜಮಾವಣೆ ಮಾಡದೇ ಆರೋಪಿ ರಾಮಕೃಷ್ಣ ಜತೆ ಹೊರಟು ಹೋಗಿದ್ದ. ಅದೇ ದಿನ ಸಂಜೆ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕಿಯಾದ ರಮ್ಯಾ ಶೆಟ್ಟಿಗೆ ಕರೆ ಮಾಡಿದ ಅರುಣ್ ವೀರಮಲ್ಲ ನಾನು ಶಾಖೆಗೆ 1 ಕೋಟಿ ಹಣ ತೆಗೆದುಕೊಂಡು ಬರುತ್ತಿದ್ದೇನೆ. ನೀವು ಆ ಹಣವನ್ನು ಡೆಪಾಸಿಟ್ ಮಾಡದೇ, ಮಾಡಿದ ಹಾಗೆ ನಗದು ನಮೂದಿಸಿ ಪಾಸ್ ಮಾಡುವಂತೆ ಸೂಚಿಸಿದ್ದ.

ಫೋನ್ ಕರೆಯಿಂದ ಅನುಮಾನಗೊಂಡ ವ್ಯವಸ್ಥಾಪಕಿ ರಮ್ಯಾ, ಏನೋ ಅಕ್ರಮ ನಡೆದಿದೆ ಎಂದು ಈ ವಿಚಾರವನ್ನು ಬ್ಯಾಂಕ್ ಆಫ್ ಬರೋಡಾ ನಗರದ ದಕ್ಷಿಣ ವಿಭಾಗ ರೀಜನಲ್ ಮ್ಯಾನೇಜರ್ ರಿತೇಶ್ ಕುಮಾರ್ ಗಮನಕ್ಕೆ ತಂದಿದ್ದರು. ರಿತೇಶ್ ಕುಮಾರ್ ಈ ಕುರಿತು ಪರಿಶೀಲಿಸಿದಾಗ, ಅರುಣ್ ವೀರಮಲ್ಲ ಚೆಸ್ಟ್ ನಿಧಿಯಿಂದ ಆರ್‌.ಆರ್‌.ನಗರ ಶಾಖೆಯ ಪರವಾಗಿ 1 ಕೋಟಿ ರೂ.ನ್ನು ತೆಗೆದುಕೊಂಡು ಬ್ಯಾಂಕ್‌ಗೆ ಜಮೆ ಮಾಡದೇ ಇರುವುದು ದೃಢಪಟ್ಟಿತ್ತು.

ಸಂಜೆ ಬ್ಯಾಂಕ್‌ಗೆ ಕರೆ ಮಾಡಿದ ಅರುಣ್ ವೀರಮಲ್ಲ, ನಾನು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿರುವುದಾಗಿ ತಿಳಿಸಿದ್ದ. ಬ್ಯಾಂಕ್‌ಗೆ ಜಮೆ ಮಾಡಲೆಂದು ಕರೆನ್ಸಿ ಚೆಸ್ಟ್‌ನಿಂದ 1 ಕೋಟಿ ರೂಪಾಯಿ ಹಣವನ್ನು ತರುತ್ತಿದ್ದಾಗ ಯಾರೋ ದರೋಡೆ ಮಾಡಿದರು, ಎಲ್ಲ ಹಣವನ್ನೂ ಕಳೆದುಕೊಂಡಿರುವುದಾಗಿ ಕತೆ ಕಟ್ಟಿದ್ದ. ಅರುಣ್ ಗೊಂದಲದ ಹೇಳಿಕೆ ಕೇಳಿ ಅನುಮಾನಗೊಂಡ ರಿತೇಶ್ ಈ ಕುರಿತು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಅರುಣ್ ವೀರಮಲ್ಲ ಹಾಗೂ ರಾಮಕೃಷ್ಣನನ್ನು ಕರೆಸಿ ವಿಚಾರಣೆ ನಡೆಸಿದಾಗ ನಿಜ ಸಂಗತಿ ಬಯಲಾಗಿದೆ. ಕೆಲ ದಿನಗಳ ಹಿಂದೆ ಮಧ್ಯವರ್ತಿ ಬಸವರಾಜ್ ಮೂಲಕ ಅರುಣ್‌ ವೀರಮಲ್ಲನಿಗೆ ಆರೋಪಿ ಇಮ್ತಿಯಾಜ್ ಪರಿಚಯವಾಗಿತ್ತು. 1 ಕೋಟಿ ಹಣ ನೀಡಿದರೆ ಕೆಲವೇ ಗಂಟೆಗಳಲ್ಲಿ 2 ಕೋಟಿ ರೂ. ಕಪ್ಪುಹಣ ಕೊಡುತ್ತೇನೆಂದು ಆರೋಪಿ ಇಮ್ತಿಯಾಜ್ ನಯವಾಗಿ ನಂಬಿಸಿದ್ದ. ಅದರಲ್ಲಿ ಬಸವರಾಜ್‌ಗೂ ಕಮಿಷನ್ ಕೊಡುವುದಾಗಿ ಹೇಳಿದ್ದ. ಈತನ ಮಾತನ್ನು ನಂಬಿ ಕಡಿಮೆ ಅವಧಿಯಲ್ಲಿ ಕೋಟಿ ಹಣ ಗಳಿಸಬಹುದು ಎಂದುಕೊಂಡ ಬ್ಯಾಂಕ್ ಮ್ಯಾನೇಜರ್ ಅರುಣ್, ಕರೆನ್ಸಿ ಚೆಸ್ಟ್‌ನಿಂದ 1 ಕೋಟಿ ಹಣವನ್ನು ಪಡೆದು ಇಮ್ತಿಯಾಜ್‌ಗೆ ಕೊಟ್ಟಿದ್ದ. ಆದರೆ, ಆರೋಪಿ ಇಮ್ತಿಯಾಜ್ ಹಣ ಹಿಂತಿರುಗಿಸದೇ ಮೋಸ ಮಾಡಿದಾಗ ದರೋಡೆ ಕತೆ ಕಟ್ಟಿರುವುದಾಗಿ ವಿಚಾರಣೆ ವೇಳೆ ಅರುಣ್ ವೀರಮಲ್ಲ ಬಾಯಿ ಬಿಟ್ಟಿದ್ದಾನೆ.

ಅಕ್ರಮವಾಗಿ ಹಣ ಸಂಪಾದಿಸುವ ಅಸೆಗೆ ಬಿದ್ದ ಅರುಣ್ ವೀರಮಲ್ಲ ನನ್ನು ಪ್ರಮುಖ ಆರೋಪಿ ಎಂದು ಪರಿಗಣಿಸಿದ್ದು, ಅರುಣ್ ಮತ್ತು ರಾಮಕೃಷ್ಣ ಇಬ್ಬರ ಮೇಲೆ ಶಿಸ್ತು ಕ್ರಮಕ್ಕೆ ಮುಂದಾಗಿ ಅಮಾನತುಗೊಳಿಸಿದೆ, ಈ ಸಂಬಂಧ ನಾಲ್ವರು ಆರೋಪಿಗಳು ಪೊಲೀಸ್ ವಶದಲಿದ್ದು ವಿಚಾರಣೆ ಮುಂದುವರೆದಿದೆ.

Last Updated : Jan 30, 2021, 7:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.