ಬಳ್ಳಾರಿ: ನಗರದ ಹೊರವಲಯದ ವಿನಾಯಕ ನಗರದ ಗಣೇಶ ದೇವಸ್ಥಾನದ ಹತ್ತಿರ ಯುವಕನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ.
ಮೃತ ಯುವಕ ಅಲ್ಲಿಪುರ ನಿವಾಸಿ ಆಟೋ ಚಾಲಕ ಎಂದು ತಿಳಿದುಬಂದಿದೆ. ಕೊಲೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಸ್ನೇಹಿತರು ಕುಡಿದ ಅಮಲಿನಲ್ಲಿ ಹತ್ಯೆ ಮಾಡಿದ್ದಾರೆ ಎಂದು ಸ್ಥಳೀರು ಆರೋಪಿಸಿದ್ದಾರೆ.
ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿ ಪರೀಶಿಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: 130 ರೂಪಾಯಿ ಆಸೆ ತೋರಿಸಿ 1 ಲಕ್ಷ ದೋಚಿದ ಐನಾತಿ ಕಳ್ಳರು