ಕಲಬುರಗಿ: ಟ್ಯಾಂಕರ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಪಕ್ಕದ ಹಳ್ಳಕ್ಕೆ ಲಾರಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಆಳಂದ ತಾಲೂಕಿನ ಶಕಾಪುರ ಹಳ್ಳದಲ್ಲಿ ನಡೆದಿದೆ. ಆಳಂದ ತಾಲೂಕಿನ ತಡಕಲ್ ಗ್ರಾಮದ ದೇವಿಂದ್ರಪ್ಪ ಕಾಂಬಳೆ (37) ಚಾಲಕ ಮೃತ ಚಾಲಕ. ಲಾರಿಯೊಳಗಿದ್ದ ಇನ್ನಿಬ್ಬರು ಈಜುತ್ತ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಳ್ಳಕ್ಕೆ ಬಿದ್ದ ಲಾರಿ: ತಡಕಲ್ ಗ್ರಾಮದ ದೇವಿಂದ್ರಪ್ಪ ತಮ್ಮ ಲಾರಿಯಲ್ಲಿ ಕಬ್ಬಿಣದ ವಸ್ತುಗಳನ್ನು ತೆಗೆದುಕೊಂಡು ಮಹಾರಾಷ್ಟ್ರದ ಪುಣೆಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಇರುವ ತಮ್ಮ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಮಂಗಳವಾರ ಬೆಳಗ್ಗೆ ಪ್ರಯಾಣ ಆರಂಭಿಸಿದ್ದರು. ಚಾಲಕ ಲಾರಿಯನ್ನು ಸ್ವಲ್ಪ ದೂರ ಚಾಲನೆ ಮಾಡಿದ ಬಳಿಕ ಶಕಾಪುರ ಹತ್ತಿರ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಂಭವಿಸಿದ ತಕ್ಷಣ ಲಾರಿ ಹಳ್ಳಕ್ಕೆ ಚಕ್ರಗಳು ಮೇಲ್ಮುಖವಾಗಿ ಉರುಳಿಬಿದ್ದಿದೆ. ಈ ವೇಳೆ ದೇವಿಂದ್ರಪ್ಪ ಅವರು ಲಾರಿಯಿಂದ ಹೊರಬರಲಾಗದೇ ಸಾವಿಗೀಡಾಗಿದ್ದು, ಲಾರಿಯೊಳಗಿದ್ದ ಇನ್ನಿಬ್ಬರು ಈಜಿ ದಡ ಸೇರಿದ್ದಾರೆ.
ಈ ಅಪಘಾತದ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ. ಅಪಘಾತದಲ್ಲಿ ಚಾಲಕ ದೇವಿಂದ್ರಪ್ಪ ಸಾವಿಗೀಡಾಗಿರುವ ಸುದ್ದಿ ಕೇಳಿ ಮನೆಯಲ್ಲಿ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂಓದಿ:ಫುಡ್ ಡೆಲಿವರಿ ಬಾಯ್ ಸೇರಿ ಇಬ್ಬರ ಮೇಲೆ ಗುಂಪು ದಾಳಿ: ಐವರು ಆರೋಪಿಗಳ ಬಂಧನ