ETV Bharat / crime

ಬರ್ತ್​ಡೇ ಆಚರಿಸಿಕೊಳ್ಳಲು ಬಂದ ಯುವಕ ಮಹಡಿಯಿಂದ ಬಿದ್ದು ಗಂಭೀರ ಗಾಯ

author img

By

Published : Dec 25, 2022, 4:43 PM IST

ಬರ್ತ್​ಡೇ ಆಚರಿಸಿಕೊಳ್ಳಲು ಹೋಟೆಲ್​ಗೆ ಬಂದಿದ್ದ ವ್ಯಕ್ತಿ-ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಬಿದ್ದು ಗಾಯ- ಯುವಕನ ಜೊತೆಗಿದ್ದ ಯುವತಿಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು

ಬರ್ತ್​ಡೇ ಆಚರಿಸಿಕೊಳ್ಳಲು ಬಂದ ಯುವಕ ಮಹಡಿಯಿಂದ ಬಿದ್ದು ಗಂಭೀರ ಗಾಯ
a-young-man-celebrating-his-birthday-fell-from-roof-of-a-hotel-in-lucknow

ಲಕ್ನೋ(ಉತ್ತರ ಪ್ರದೇಶ): ಹುಟ್ಟುಹಬ್ಬ ಅಥವಾ ಜನ್ಮದಿನ ಬಂತೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಖುಷಿ ಅನ್ನಿಸೋದರಲ್ಲಿ ಅನುಮಾನವೇ ಇಲ್ಲ ಬಿಡಿ.. ತಮ್ಮದೇ ಬರ್ತಡೇ ಆಚರಿಸಿಕೊಳ್ಳಲು ಕೆಲವರು ಕಾತರರಾಗಿದ್ರೆ, ಅವರ ಕುಟುಂಬಸ್ಥರು ಮತ್ತು ಸಹಪಾಠಿಗಳು ಇದಕ್ಕಾಗಿ ತಿಂಗಳು ಮೊದಲೇ ಭರ್ಜರಿ ಪ್ಲಾನ್ ಮಾಡಿರ್ತಾರೆ.​ ಉತ್ತರ ಪ್ರದೇಶದಲ್ಲಿ ನಡೆದ ಬರ್ತಡೇ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಯುವಕ ಆಸ್ಪತ್ರೆ ಸೇರುವಂತಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಬರ್ತಡೇ ಬಾಯ್​ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಹೌದು, ಸರೋಜಿನಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಯುವಕನೊಬ್ಬ ಅನುಮಾನಾಸ್ಪದ ಸ್ಥಿತಿಯಲ್ಲಿ ಹೋಟೆಲ್‌ನ ಮೊದಲ ಮಹಡಿಯಲ್ಲಿರುವ ಕೊಠಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಬಗ್ಗೆ ಕೂಡಲೇ ಸರೋಜಿನಿನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಯುವಕನ ಜೊತೆಗಿದ್ದ ಗೆಳತಿಯ ವಿಚಾರಣೆ.. ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡಿರುವ ಯುವಕನನ್ನು ಕೃಷ್ಣಾನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಯುವಕನ ಸಂಬಂಧಿಕರು ಆತನನ್ನು ಟ್ರಾಮಾ ಸೆಂಟರ್‌ಗೆ ದಾಖಲಿಸಿದ್ದಾರೆ. ಶನಿವಾರ ಸಂದರ್ಭ ಯುವಕನ ಜೊತೆ ಇದ್ದ ಆತನ ಸ್ನೇಹಿತೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರು ಹೇಳಿದ್ದೇನು..? ಪೊಲೀಸರ ಪ್ರಕಾರ, ಆಲಂಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯ ಟೇಢಿ ಪುಲಿಯಾ ನಿವಾಸಿ ಸಕ್ಷಮ್ ಸಿಂಗ್ (26) ಎಂಬುವರು ಶನಿವಾರ ಬೆಳಗ್ಗೆ ಸರೋಜಿನಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಂತಿನಗರದಲ್ಲಿರುವ ಸ್ಕೈಲೈನ್ ಹೋಟೆಲ್‌ನ ಕೊಠಡಿ ಸಂಖ್ಯೆ 17 ಅನ್ನು ತನ್ನ ಮಹಿಳಾ ಸ್ನೇಹಿತೆಯೊಂದಿಗೆ ತನ್ನ ಹುಟ್ಟುಹಬ್ಬ ಆಚರಿಸಲು ಬಾಡಿಗೆಗೆ ಪಡೆದಿದ್ದರು. ಆದರೆ ಅವರು ರಾತ್ರಿ 8.30ರ ಸುಮಾರಿಗೆ ಏಕಾಏಕಿ ಮೊದಲ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಆತನನ್ನು ಬಾರಾಬಿರವಾ ಪ್ರದೇಶದಲ್ಲಿರುವ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಅಲ್ಲಿಂದ ಯುವಕನ ಕುಟುಂಬಸ್ಥರು ಆತನನ್ನು ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದ್ದಾರೆ. ಹೊಟೇಲ್​ನಲ್ಲಿ ಆತನ ಜೊತೆಗಿದ್ದ ಗೆಳತಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿದ ಕೃಷ್ಣನಗರ ಎಸಿಪಿ ನವೀನ್ ದ್ವಿವೇದಿ, ಸರೋಜಿನಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸ್ಕೈಲೇನ್ ಹೋಟೆಲ್‌ಗೆ ಯುವಕ ಮತ್ತು ಯುವತಿ ಬಂದಿದ್ದರು. ಅಂದು ಯುವಕ ಸಕ್ಷಮ್ ಸಿಂಗ್ ಅವರ ಜನ್ಮದಿನವಾಗಿತ್ತು. ಆದರೆ ಸಕ್ಷಮ್ ಸಿಂಗ್ ರಾತ್ರಿ ಹೋಟೆಲ್ ಕೊಠಡಿಯ ಗಾಜಿನ ಕಿಟಕಿಯಿಂದ ಕೆಳಗೆ ಬಿದ್ದಿದ್ದಾರೆ. ಹೋಟೆಲ್‌ನಲ್ಲಿರುವ ಸಕ್ಷಮ್‌ನ ಸ್ನೇಹಿತೆಯ ವಿಚಾರಣೆ ನಡೆಸಲಾಗುತ್ತಿದೆ. ಪ್ರಸ್ತುತ, ಸಕ್ಷಮ್ ಸಿಂಗ್ ಅವರನ್ನು ಅಪೋಲೋ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿಂದ ಅವರ ಸಂಬಂಧಿಕರು ಅವರನ್ನು ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದ್ದಾರೆ ಎಂದರು.

ಇದನ್ನೂ ಓದಿ: ಮಹಡಿಯಿಂದ ಬಿದ್ದು ಮಂಕಿಮ್ಯಾನ್ ಸಾವು.. ಬಂಧಿಸಲು ಬಂದಿದ್ದ ಪೊಲೀಸರಿಗೆ ಹಿಗ್ಗಾಮುಗ್ಗಾ ಥಳಿತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.