ETV Bharat / crime

ತುಮಕೂರು: ಏಕಾಏಕಿ ಕುರಿಗಳ ಮೇಲೆ ಹರಿದ ಲಾರಿ.. 60 ಸಾವು, 20 ಕುರಿಗಳಿಗೆ ಗಾಯ!

ಏಕಾಏಕಿ ಕುರಿಗಳ ಮೇಲೆ ಲಾರಿ ಹರಿದ ಪರಿಣಾಮ 60 ಕುರಿಗಳು ಸಾವನ್ನಪ್ಪಿದ್ದು, 20 ಕುರಿಗಳು ಗಾಯಗೊಂಡಿದ್ದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

sheep died in road accident in Tumkur, Lorry run on sheep in Tumkur, Tumkur crime news, Tumkur accident news, ತುಮಕೂರಿನಲ್ಲಿ ರಸ್ತೆ ಅಪಘಾತದಲ್ಲಿ ಕುರಿಗಳು ಸಾವು, ತುಮಕೂರಿನಲ್ಲಿ ಕುರಿಗಳ ಮೇಲೆ ಹರಿದ ಲಾರಿ, ತುಮಕೂರು ಅಪರಾಧ ಸುದ್ದಿ, ತುಮಕೂರು ಅಪಘಾತ ಸುದ್ದಿ,
ತುಮಕೂರು: ಏಕಾಏಕಿ ಕುರಿಗಳ ಮೇಲೆ ಹರಿದ ಲಾರಿ
author img

By

Published : May 6, 2022, 3:15 PM IST

ತುಮಕೂರು: ಲಾರಿ ಹರಿದ ಪರಿಣಾಮ 60 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟು 20 ಕುರಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 75ರ ಗವಿಮಠ ಬಳಿ ನಡೆದಿದೆ.

ಅತೀ ವೇಗದಿಂದ ಬಂದ ಲಾರಿಯೊಂದು ಏಕಾಏಕಿ ಕುರಿಗಳ ಮೇಲೆ ಹರಿದಿದೆ. ಈ ಅಪಘಾತದಲ್ಲಿ ಕುರಿಗಾಹಿ ಕೂಡ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ರಾಮಯ್ಯನಹಟ್ಟಿ ಗ್ರಾಮದ ಡೊಡ್ಡ ಈರಪ್ಪ ಎಂಬುವರ ಕುರಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿವೆ.

ಓದಿ: ರಾಮನಗರದಲ್ಲಿ ಭಾರಿ ಮಳೆ: 15ಕ್ಕೂ ಹೆಚ್ಚು ಕುರಿಗಳು ಸಾವು, ವಿದ್ಯುತ್ ಕಂಬಗಳು ಧರಾಶಾಹಿ

ಪ್ರತಿ ವರ್ಷ ಕುರಿಗಳನ್ನು ದೊಡ್ಡ ಈರಪ್ಪ ತಮ್ಮ ಗ್ರಾಮದಿಂದ ತುಮಕೂರು, ಮಂಡ್ಯ, ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲದೇ ಅಲ್ಲಿನ ರೈತರ ಜಮೀನಿನಲ್ಲಿ ಬಿಟ್ಟು, ಜಮೀನಿನ ಮಾಲೀಕರಿಂದ ದವಸ ಧಾನ್ಯ ಹಾಗೂ ಹಣವನ್ನು ಪಡೆಯುವುದು ಸಾಮಾನ್ಯವಾಗಿತ್ತು. ಅದೇ ರೀತಿ, ಕಳೆದು ಹತ್ತು ದಿನಗಳಿಂದ ಕುರಿಗಳನ್ನು ಇವರು ತುಮಕೂರು ಜಿಲ್ಲೆಯ ಕಡೆಗೆ ಕರೆದುಕೊಂಡು ಬಂದಿದ್ದರು.

ಈ ಘಟನೆ ಸಂಬಂಧ ಕುಣಿಗಲ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.