ದುರ್ಗ್ (ಛತ್ತೀಸ್‌ಗಢ): ಭಿಲಾಯ್ ಸ್ಟೀಲ್ ಪ್ಲಾಂಟ್(ಬಿಎಸ್‌ಪಿ)ನ ಮಟೀರಿಯಲ್ ರಿಕವರಿ ವಿಭಾಗದಲ್ಲಿ ಸ್ಫೋಟವಾಗಿದ್ದು, ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಾಯಗೊಂಡವರಲ್ಲಿ ಇಬ್ಬರು ಬಿಎಸ್‌ಪಿ ಸಿಬ್ಬಂದಿ ಹಾಗೂ ನಾಲ್ವರು ಗುತ್ತಿಗೆ ಕಾರ್ಮಿಕರು ಸೇರಿದ್ದಾರೆ. ಎಲ್ಲಾ ಗಾಯಾಳುಗಳನ್ನು ಭಿಲಾಯಿಯ ಸೆಕ್ಟರ್ 9 ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಟೀಲ್ ಪ್ಲಾಂಟ್‌ನ ಎಂಆರ್‌ಡಿ 2ನೇ ಘಟಕದಲ್ಲಿ ಬೆಳಗ್ಗೆ 8 ಗಂಟೆಗೆ ಈ ದುರಂತ ಸಂಭವಿಸಿದೆ.
ಮನೀಶ್ ಸಾಹು, ಪಿ ರಾಜು ನಾಯರ್, ರಜನೀಶ್ ಚೌಹಾಣ್, ವಿಜಯ್ ಕುಮಾರ್ ಹಾಗೂ ಮೈತಿ ಅಲ್ಗಾನ್ ಗಾಯಗೊಂಡವರು ಎಂದು ಗುರುತಿಸಲಾಗಿದೆ. ಸ್ಲ್ಯಾಗ್ ರಿವರ್ಸಲ್ ಸಮಯದಲ್ಲಿ ಈ ಘಟನೆ ನಡೆದಿದೆ. ಸ್ಲ್ಯಾಗ್ ಲೋಹದ ಕರಗುವಿಕೆಯ ಉಪ-ಉತ್ಪನ್ನವಾಗಿದೆ. ಪ್ರತಿ ವರ್ಷ ನೂರಾರು ಟನ್‌ಗಳಷ್ಟು ಉಕ್ಕನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.