ಪಳನಿ(ತಮಿಳುನಾಡು): ವಾರ್ಷಿಕ ಮೆರವಣಿಗೆ ವೇಳೆ 400 ವರ್ಷ ಹಳೆಯ ಚಿನ್ನ ಮತ್ತು ತಾಮ್ರದ ಶೂಲಗಳು ನಾಪತ್ತೆಯಾಗಿರುವ ಘಟನೆ ಪಳಿನಿ ದೇವಸ್ಥಾನದಲ್ಲಿ ನಡೆದಿದೆ. ಕಾರೈಕುಡಿಯಿಂದ ಪಳನಿ ದೇವಸ್ಥಾನದ ಮಾರ್ಗ ಮಧ್ಯ ಶೂಲಗಳು ಕಳುವಾಗಿವೆ ಎನ್ನಲಾಗಿದೆ.
ಕರಿಕುಡಿ, ಪುದುಕೊಟ್ಟೈ ಮತ್ತು ಶಿವಗಂಗೈಯ ನಗರಥರ್ ಸಮುದಾಯವು 1601 ರಿಂದ ಅಂದರೆ ಕಳೆದ 422 ವರ್ಷಗಳಿಂದ ಈ ಯಾತ್ರೆ ಮಾಡುತ್ತಾ ಬಂದಿವೆ. ಜ.13 ರಂದು ನಾಥಮ್ ಪ್ರದೇಶವನ್ನು ತಲುಪಿದಾಗ ಮೆರವಣಿಗೆ ತಂಡ ಪೆರುಮಾಳ್ ದೇವಸ್ಥಾನದಲ್ಲಿ ಉಳಿದುಕೊಂಡಿದ್ದರು.
ದೇವಾಲಯದ ಗರ್ಭಗುಡಿಯಲ್ಲಿ ಬೆಳ್ಳಿ ಪೆಟ್ಟಿಗೆಯಲ್ಲಿ ಶೂಲಗಳನ್ನು ಇರಿಸಿದ್ದಾರೆ. ಆದರೆ, ಮರುದಿನ ಬೆಳಿಗ್ಗೆ ನೋಡಿದರೆ ಶೂಲಗಳು ನಾಪತ್ತೆಯಾಗಿವೆ. ಈ ಕುರಿತು ನಾಥಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೋಟಿ ಬೆಲೆ ಬಾಳುವ ಚಿನ್ನ, ವಜ್ರ ಖಚಿತ ಐಫೋನ್ ಕದ್ದ ಕಳ್ಳರ ಗ್ಯಾಂಗ್ ಸಿಕ್ಕಿಬಿದ್ದಿದ್ದೇ ರೋಚಕ..!