ಮುಂಬೈ(ಮಹಾರಾಷ್ಟ್ರ): ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಶಾರ್ಜಾದಿಂದ ಬಂದಿದ್ದ ಕೀನ್ಯಾ ಮಹಿಳೆ ಕಾಫಿ ಬಾಟಲಿಗಳಲ್ಲಿ ಬಚ್ಚಿಟ್ಟು ತಂದ 3.80 ಕೆಜಿ ಚಿನ್ನ ಹಾಗೂ ಕೆಲವು ಬೆಲ ಬಾಳುವ ವಸ್ತುಗಳನ್ನು ಪತ್ತೆ ಹಚ್ಚಿದ್ದು, ಎಲ್ಲಾವನ್ನು ವಶಕ್ಕೆ ಪಡೆದಿದ್ದಾರೆ.
ಕೀನ್ಯಾದ ಮಹಿಳೆಯರನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಕಾಫಿ ಬಾಟಲಿಗಳು ಮತ್ತು ಒಳ ಉಡುಪು ಹಾಗೂ ಪಾದರಕ್ಷೆಗಳಲ್ಲಿ ಚಿನ್ನವನ್ನು ಬಚ್ಚಿಕೊಂಡು ಬಂದಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಕೀನ್ಯಾ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯ ಜೊತೆಯಲ್ಲಿ ಬಂದಿದ್ದ ಇತರರನ್ನು ಬಿಟ್ಟು ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೇರಳ ರಾಜಕೀಯ ಮುಖಂಡರ ಕೊಲೆ.. ಪ್ರಮುಖ ಆರೋಪಿ ಸೇರಿದಂತೆ ಇಬ್ಬರ ಬಂಧನ