ಶಿವಮೊಗ್ಗ/ತುಮಕೂರು: ಕೋವಿಡ್, ಒಮಿಕ್ರಾನ್ ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಆದರೆ ಗೃಹ ಸಚಿವರ ಕ್ಷೇತ್ರದಲ್ಲೇ ನಿಯಮವನ್ನು ಗಾಳಿಗೆ ತೂರಿ ಜಾತ್ರೆ ನಡೆಸಲಾಗುತ್ತಿದೆ.
ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಗ್ರಾಮದಲ್ಲಿಂದು ಸುಬ್ರಮಣ್ಯ ದೇವರ ಜಾತ್ರೆ ನಡೆಸಲಾಗುತ್ತಿದೆ. ಇಂದು ಸುಬ್ರಮಣ್ಯ ಷಷ್ಟಿ ಕಾರಣ ಅರಳಸುರಳಿಯಲ್ಲಿ ಷಷ್ಟಿ ಜಾತ್ರೆ ನಡೆಸಲಾಗುತ್ತಿದೆ. ಜಾತ್ರೆಯಲ್ಲಿ ಭಾಗಿಯಾದ ಜನ ಕೋವಿಡ್ ನಿಯಮ ಮರೆತಿದ್ದಾರೆ. ಜಾತ್ರೆ ನಡೆಯಲು ಬಿಟ್ಟು ಅಧಿಕಾರಿಗಳು, ಜನಪ್ರತಿನಿಧಿಗಳು, ಪೊಲೀಸರು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.
ಕುರಿ ಮೇಕೆಗಳ ಸಂತೆಗಿಲ್ಲವಾ ಕರ್ಫ್ಯೂ ನಿಯಮ?
ತುಮಕೂರು ಜಿಲ್ಲೆಯಲ್ಲಿ ಬಹುತೇಕ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಆದರೆ ಕೊರಟಗೆರೆ ತಾಲೂಕಿನ ರಾಂಪುರದಲ್ಲಿ ಮಾತ್ರ ಕುರಿ ಮೇಕೆಗಳ ಸಂತೆಗೆ ಯಾವುದೇ ಅಡ್ಡಿಯಿಲ್ಲ ಎಂಬಂತಿತ್ತು. ಎಪಿಎಂಸಿ ಆವರಣದಲ್ಲಿ ಕುರಿ ಮೇಕೆಗಳ ಸಂತೆಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಸಂತೆಗೆ ಬಂದಂತಹ ರೈತರು ಮಾತ್ರ ಎಪಿಎಂಸಿ ಹೊರಗಡೆ ಕೋವಿಡ್ ಭಯ ಮರೆತು ವ್ಯಾಪಾರ-ವಹಿವಾಟಿನಲ್ಲಿ ಪಾಲ್ಗೊಂಡರು. ಗ್ರಾಮೀಣ ಪ್ರದೇಶದಲ್ಲಿ ಯಾವುದೇ ರೀತಿಯ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂಗೆ ಡೋಂಟ್‌ಕೇರ್ : ಹೋಟೆಲ್ಗಳು ಒಪನ್, ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ