ETV Bharat / city

ತುಮಕೂರು : ಜನರನ್ನು ನೋಡಿ ದಿಕ್ಕಾಪಾಲಾಗಿ ಓಡಿದ ಕರಡಿಗಳು

ಕೊರಟಗೆರೆ ತಾಲೂಕಿನ ಚಿಕ್ಕರಸನಹಳ್ಳಿಯಲ್ಲಿ ನಿನ್ನೆ ಎರಡು ಕರಡಿಗಳು ಪ್ರತ್ಯಕ್ಷವಾಗಿದ್ದವು. ಆದರೆ, ಅರಣ್ಯ ಇಲಾಖೆಯ ಸಿಬ್ಬಂದಿ ಕೈಗೆ ಸಿಗದೆ ಓಡಿ ಹೋಗಿವೆ..

ಕರಡಿ
ಕರಡಿ
author img

By

Published : May 29, 2022, 2:21 PM IST

ತುಮಕೂರು : ಆಹಾರ ಹುಡುಕುತ್ತಾ ಗ್ರಾಮಕ್ಕೆ ಎಂಟ್ರಿಕೊಟ್ಟ 2 ಕರಡಿಗಳು ಜನರ ಕೂಗಾಟ, ಕಿರುಚಾಟಕ್ಕೆ ಬೆಚ್ಚಿಬಿದ್ದು ದಿಕ್ಕಾಪಾಲಾಗಿ ಓಡಿ ಹೋಗಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚಿಕ್ಕರಸನಹಳ್ಳಿಯಲ್ಲಿ ನಡೆದಿದೆ.

ತೋಟದಲ್ಲಿ ಕರಡಿಗಳಿರುವುದನ್ನ ಗಮನಿಸಿದ ಚಿಕ್ಕರಸನಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಗ್ರಾಮಸ್ಥರನ್ನ ಕಂಡ ಕರಡಿಗಳು ಯಾರ ಕೈಗೂ ಸಿಗದೆ ಅಲ್ಲಿಂದ ಕಾಲ್ಕಿತ್ತಿವೆ.

ಕೊರಟಗೆರೆ ತಹಶೀಲ್ದಾರ್​ ನಾಹೀದಾ ಸಹ ಸ್ಥಳಕ್ಕೆ ಭೇಟಿ ನೀಡಿ, ಕರಡಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ತಿಳಿಸಿದ್ದಾರೆ. ಇನ್ನೊಂದೆಡೆ, ಕರಡಿ ನೋಡಿದ ಗ್ರಾಮಸ್ಥರು ಅಟ್ಟಾಡಿಸಿಕೊಂಡು ಹೋಗುವುದನ್ನ ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಹಾಸ ಪಟ್ಟರು.

ಜನರನ್ನ ಕಂಡು ದಿಕ್ಕಾಪಾಲಾಗಿ ಓಡಿದ ಕರಡಿಗಳು..

ಇದನ್ನೂ ಓದಿ: ಮೂರು ದಿನ ಮುಂಚಿತವಾಗಿ ಕೇರಳ ಪ್ರವೇಶಿಸಿದ ನೈರುತ್ಯ ಮಾನ್ಸೂನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.