ETV Bharat / city

ದೂರುದಾರರನ್ನು ತಮ್ಮ ಕಾರಿನಲ್ಲೇ ಇನ್ಸ್​​ಪೆಕ್ಟರ್ ಕಚೇರಿಗೆ ಕಳುಹಿಸಿಕೊಟ್ಟ ಎಸ್​​ಪಿ.. ಎಸ್​​​ಐ ಕಕ್ಕಾಬಿಕ್ಕಿ! - ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್

ದೂರು ಸ್ವೀಕರಿಸಿದರೂ ಆರೋಪಿಗಳನ್ನು ಬಂಧಿಸಲು ಮೀನಮೇಷ ಎಣಿಸುತ್ತಿದ್ದ ವಿಷಯ ತಿಳಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರು ದೂರುದಾರರನ್ನು ತಮ್ಮ ಕಾರಿನಲ್ಲೇ ಕಳುಹಿಸಿಕೊಟ್ಟಿದ್ದಾರೆ. ತುರುವೇಕೆರೆ ತಾಲೂಕಿನ ದಂಡಿನಶಿವರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Tumkur SP sent the complainant to his office in his car
ದೂರುದಾರರನ್ನು ತಮ್ಮ ಕಾರಿನಲ್ಲೇ ಇನ್ಸ್​​ಪೆಕ್ಟರ್ ಕಚೇರಿಗೆ ಕಳುಹಿಸಿಕೊಟ್ಟ ಎಸ್​​ಪಿ
author img

By

Published : Jan 14, 2022, 10:37 AM IST

Updated : Jan 14, 2022, 1:44 PM IST

ತುಮಕೂರು: ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಿದರೂ ಆರೋಪಿಗಳನ್ನು ಬಂಧಿಸಲು ಮೀನಮೇಷ ಎಣಿಸುತ್ತಿದ್ದ ವಿಷಯ ತಿಳಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರು ದೂರುದಾರರನ್ನು ತಮ್ಮ ಕಾರಿನಲ್ಲೇ ಇನ್ಸ್​​ಪೆಕ್ಟರ್ ಕಚೇರಿಗೆ ಕಳುಹಿಸಿಕೊಟ್ಟ ಘಟನೆ ನಡೆದಿದೆ.

ನಾಗೇಂದ್ರಪ್ಪ-ದೂರುದಾರ

ದಂಡಿನಶಿವರ ಪೊಲೀಸ್ ಠಾಣೆ ಸಿಬ್ಬಂದಿ ಎಸ್​ಪಿ ಕಾರು ಇನ್ಸ್​​ಪೆಕ್ಟರ್ ಕಚೇರಿಗೆ ಬರುತ್ತಿದ್ದಂತೆ, ಅಲ್ಲದೇ ಅದರಲ್ಲಿದ್ದ ದೂರುದಾರರನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ತುರುವೇಕೆರೆ ತಾಲೂಕಿನ ದಂಡಿನಶಿವರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಏನಿದು ಘಟನೆ?:

ಕೋಡಿ ಹಳ್ಳಿಯಲ್ಲಿ ಶಿವಕುಮಾರ್ ಮತ್ತು ಚಂದನ್ ಎಂಬ ಇಬ್ಬರು ನಾಗೇಂದ್ರಪ್ಪ ಎಂಬವರ ಮೇಲೆ ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕಾಗಿ ತೀವ್ರವಾಗಿ ಹಲ್ಲೆ ನಡೆಸಿದ್ದರು. ಈ ಸಂಬಂಧ ನಾಗೇಂದ್ರಪ್ಪ ಅವರು ದಂಡಿನಶಿವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕಿದ್ದರು. ಅಲ್ಲದೇ ಅನೇಕ ಬಾರಿ ನಾಗೇಂದ್ರಪ್ಪ ಅವರು ಸಬ್ ಇನ್ಸ್​​ಪೆಕ್ಟರ್ ಶಿವಲಿಂಗಪ್ಪ ಅವರಿಗೆ ಮನವಿ ಮಾಡಿದ್ದರೂ ಸ್ಪಂದಸಿರಲಿಲ್ಲ. ಜತೆಗೆ ಆರೋಪಿಗಳನ್ನು ಬಂಧಿಸಲು ಬಾಡಿಗೆ ಕಾರು ತೆಗೆದುಕೊಂಡು ಬಾ ಎಂದು ಪುನಃ ದೂರುದಾರ ನಾಗೇಂದ್ರಪ್ಪ ಅವರಿಗೆ ಹೇಳುತ್ತಿದ್ದರು ಎನ್ನಲಾಗಿದೆ.

ಸಬ್​​ ಇನ್ಸ್​ಪೆಕ್ಟರ್ ಶಿವಲಿಂಗಪ್ಪ ಅವರ ವರ್ತನೆಗೆ ಬೇಸತ್ತಿದ್ದ, ನಾಗೇಂದ್ರಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರಿಗೆ ದೂರು ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಎಸ್​ಪಿ ರಾಹುಲ್ ಕುಮಾರ್ ಅವರು ಸ್ವತಃ ತಮ್ಮ ಕಾರಿನಲ್ಲಿಯೇ ದೂರುದಾರರನ್ನು ತುರುವೇಕೆರೆ ಇನ್ಸ್​​ಪೆಕ್ಟರ್ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಗುವಾಹಟಿ-ಬಿಕನೇರ್ ರೈಲು ದುರಂತ: 9 ಮಂದಿ ಸಾವು,42ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

Last Updated : Jan 14, 2022, 1:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.